ನವದೆಹಲಿ[ಏ.29]: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮೇ 12ರಂದು ಗುರುಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಮತ ಚಲಾಯಿಸಲಿದ್ದಾರೆ.

ಈ ಮೊದಲು ಕೊಹ್ಲಿ ಮತ ಹಾಕುವುದು ಅನುಮಾನ, ಅವರು ತಮ್ಮ ವಿಳಾಸವನ್ನು ಗುರುಗ್ರಾಮದಿಂದ ತಮ್ಮ ಪತ್ನಿ ವಾಸಿಸುವ ಮುಂಬೈಗೆ ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಅರ್ಜಿ ಈ ಬಾರಿ ಸ್ವೀಕಾರವಾಗುವ ಸಾಧ್ಯತೆ ಕಡಿಮೆ ಎನ್ನುವ ಸುದ್ದಿ ಹಬ್ಬಿತ್ತು.

ಆದರೆ ಸ್ವತಃ ಕೊಹ್ಲಿ, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮತ ಚೀಟಿಯ ಫೋಟೋವನ್ನು ಹಾಕಿ ತಾವು ಗುರುಗ್ರಾಮದಲ್ಲಿ ಮತದಾನ ಮಾಡುವುದಾಗಿ ಘೋಷಿಸಿದ್ದಾರೆ.