ವಿಜಯಪುರ : ಲೋಕಸಭಾ ಚುನಾವಣಾ ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದೆ. ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಭಾರೀ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. 

ಜೆಡಿಎಸ್  ಅಭ್ಯರ್ಥಿ ಸುನೀತಾ ಚವ್ಹಾಣ್ ವಿರುದ್ಧ ರಮೇಶ್ ಜಿಗಜಿಣಗಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಮುಂದಿದ್ದಾರೆ. 

ಮತ ಎಣಿಕೆ ಕೇಂದ್ರದ ಬಳಿ ಇದ್ದ ಕಾಂಗ್ರೆಸ್ ಅಭ್ಯರ್ಥಿ ಸುನೀತಾ ಜವ್ಹಾಣ ಸ್ಥಳದಿಂದ ತೆರಳಿದ್ದು, ಇದೇ ವೇಳೆ ವಿವಿ ಪ್ಯಾಟ್ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. 

ಮತದಾನದ ದಿನ ಜೇವೂರ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ವಿವಿದ ಪ್ಯಾಟ್ ಹಿಡಿದು ಸಂಚರಿಸುತ್ತಿದ್ದರು.  ಇದು ಫಲಿತಾಂಶದ ಮೇಲೆ ಇಂಪ್ಯಾಕ್ಟ್ ಆಗಿರಬಹುದು ಎಂದು ಹೇಳಿದರು.  

ಸದ್ಯ ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ  3,73,216 ಮತ ಪಡೆದಿದ್ದರೆ,  ಜೆಡಿಎಸ್ ಅಭ್ಯರ್ಥಿ ಸುನೀತಾ ಚವ್ಹಾಣ 2,11,492 ಮತ ಪಡೆದಿದ್ದಾರೆ.  

ಬಿಜೆಪಿ ಅಭ್ಯರ್ಥಿ ಜಿಗಜಿಣಗಿ 1,61,724 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.