ಸುಲ್ತಾನ್‌ಪುರ್‌ದಲ್ಲಿ ಅಬ್ಬರಿಸಿ ಬೊಬ್ಬಿರಿದ ವರುಣ್ ಗಾಂಧಿ| ತಾಯಿ ಮನೇಕಾ ಗಾಂಧಿ ಪರ ಪ್ರಚಾರ ನಡೆಸಿದ ವರುಣ್ ಗಾಂಧಿ| ಎಸ್‌ಪಿ-ಬಿಎಸ್‌ಪಿ ಅಭ್ಯರ್ಥಿ ವಿರುದ್ಧ ಹರಿಹಾಯ್ದ ವರುಣ್ ಗಾಂಧಿ| ಇಂತವರೆಲ್ಲಾ ನನ್ನ ಶೂ ಲೇಸ್ ಕಟ್ಟುತ್ತಾರೆ ಎಂದ ವರುಣ್|
ಸುಲ್ತಾನ್‌ಪುರ್(ಮೇ.05): ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಬಿಜೆಪಿ ಸಂಸದ ವರುಣ್ ಗಾಂಧಿ, ಇದೀಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.
ಸುಲ್ತಾನ್‌ಪುರ್‌ನಲ್ಲಿ ತಾಯಿ ಮನೇಕಾ ಗಾಂಧಿ ಪರ ಪ್ರಚಾರ ನಡೆಸಿದ ವರುಣ್ ಗಾಂಧಿ, ಎಸ್‌ಪಿ-ಬಿಎಸ್‌ಪಿ ಅಭ್ಯರ್ಥಿ ಚಂದ್ರ ಭದ್ರಾ ಸಿಂಗ್ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ.
ತಮ್ಮ ಭಾಷಣದಲ್ಲಿ ಭಧ್ರಾ ಸಿಂಗ್ ಹೆಸರು ಪ್ರಸ್ತಾಪಿಸಿದ ವರುಣ್, ನೀವೇನೂ ಚಿಂತೆ ಮಾಡಬೇಡಿ ‘ಇಂತಹ ವ್ಯಕ್ತಿಗಳನ್ನು ನಾನು ನನ್ನ ಶೂ ಲೇಸ್ ಕಟ್ಟಲು ಇಟ್ಟುಕೊಂಡಿದ್ದೇನೆ..’ ಎಂದು ಹೇಳಿದ್ದಾರೆ.
ವ್ಯಕ್ತಿತ್ವವೇ ಇಲ್ಲದ ಮನುಷ್ಯ ಬದುಕಿದ್ದೂ ಸತ್ತಂತೆ, ಅದರಂತೆ ಎಸ್‌ಪಿ-ಬಿಎಸ್‌ಪಿ ಅಭ್ಯರ್ಥಿ ವ್ಯಕ್ತಿತ್ವೇ ಇಲ್ಲದ ಮನುಷ್ಯ ಎಂದು ವರುಣ್ ಗಾಂಧಿ ಹರಿಹಾಯ್ದಿದ್ದಾರೆ.
ಸುಲ್ತಾನ್‌ಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ವರುಣ್ ಗಾಂಧಿ, ಈ ಬಾರಿ ತಾಯಿ ಮನೇಕಾ ಗಾಂಧಿ ಸ್ವಕ್ಷೇತ್ರ ಫಿಲ್ಬಿಟ್‌ನಿಂದ ಕಣಕ್ಕಿಳಿದ್ದಾರೆ. ಅದರಂತೆ ಫಿಲ್ಬಿಟ್ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಮನೇಕಾ ಗಾಂಧಿ ಪುತ್ರ ವರುಣ್ ಗಾಂಧಿ ಸ್ವಕ್ಷೇತ್ರ ಸುಲ್ತಾನ್‌ಪುರ್‌ದಿಂದ ಕಣಕ್ಕಿಳಿದಿದ್ದಾರೆ.
