ಪಿಲ್ಬಿಟ್(ಏ.08): ಕುಟುಂಬ ರಾಜಕಾರಣಕ್ಕೆ ಗುದ್ದು ನೀಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ನನ್ನ ಕುಟುಂಬದ ಬಹುತೇಕರು ಪ್ರಧಾನಿ ಸ್ಥಾನ ಅಲಂಕರಿಸಿದ್ದರು ಆದರೆ ನರೇಂದ್ರ ಮೋದಿ ಮಾತ್ರ ಆ ಸ್ಥಾನಕ್ಕೆ ಅರ್ಹ ವ್ಯಕ್ತಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಉತ್ತರಪ್ರದೇಶದ ಪಿಲ್ಬಿಟ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವರುಣ್ ಗಾಂಧಿ, 'ನನ್ನ ಮುತ್ತಜ್ಜ, ನನ್ನ ಅಜ್ಜಿ, ನನ್ನ ದೊಡ್ಡಪ್ಪ ಕೂಡ ಪ್ರಧಾನಿ ಸ್ಥಾನ ಅಲಂಕರಿಸಿದ್ದರು. ಆದರೆ ಪ್ರಧಾನಿ ಸ್ಥಾನಕ್ಕೆ ಮೋದಿ ಮಾತ್ರ ಘನತೆ ತಂದು ಕೊಟ್ಟಿದ್ದಾರೆ ಎಂದು ಹೇಳಿದರು.

ನರೇಂದ್ರ ಮೋದಿ ಪ್ರಧಾನಿಯಾಗಿ ಈ ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾದದ್ದು, ಈ ಹಿಂದಿನ ಯಾವ ಪ್ರಧಾನಿಯೂ ದೇಶಕ್ಕೆ ಇಷ್ಟು ಕೊಡುಗೆ ನೀಡಿಲ್ಲ ಎಂದು ವರುಣ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ದೇಶವನ್ನು ಕುಟುಂಬ ರಾಜಕಾರಣದಿಂದ ಮುಕ್ತ ಮಾಡಬೇಕಿದ್ದು, ಇದಕ್ಕಾಗಿ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಿದೆ ಎಂದು ವರುಣ್ ಗಾಂಧಿ ಮತದಾರರಲ್ಲಿ ಮನವಿ ಮಾಡಿದರು.