ಥಂಡಾಗಿದ್ದ ಉತ್ತರ ಕನ್ನಡದಲ್ಲಿ ಬಿಜೆಪಿಗೆ ಮಹಿಳಾ ನಾಯಕಿಯಿಂದ ಶಾಕ್!
ಉತ್ತರ ಕನ್ನಡ ಕ್ಷೇತದಲ್ಲಿಯೂ ಚುನಾವಣೆ ಬಿಸಿ ಇದೆ. ನಾಯಕರ ಪಕ್ಷಾಂತರ ಪರ್ವವೂ ನಿಧಾನಕ್ಕೆ ಆರಂಭವಾಗಿದೆ.
ಕಾರವಾರ[ಏ. 18] ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿಯೂ ಬಿಸಿ ಹೆಚ್ಚಾಗಿದೆ. ಬಿಜೆಪಿ ಪಭಾವಿ ನಾಯಕಿ ಜೆಡಿಎಸ್ ಸೇರ್ಪಡೆ ಸಾಧ್ಯತೆ ಹೆಚ್ಚಾಗಿದ್ದು ಕಮಲ ಪಾಳೆಯಕ್ಕೆ ಆತಂಕ ಎದುರಾಗಿದೆ.
ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ. ಹಾಲಿ ಬಿಜೆಪಿ ಸದಸ್ಯೆ ಗಾಯತ್ರಿ ಗೌಡ ಜೆಡಿಎಸ್ ಕಡೆ ಮುಖಮಾಡಿದ್ದಾರೆ ಎನ್ನಲಾಗಿದೆ. ಗಾಯತ್ರಿ ಗೌಡ ಒಕ್ಕಲಿಗ ಸಮಾಜದ ಪ್ರಭಾವಿ ನಾಯಕಿಯಾಗಿದ್ದು ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಕರ್ನಾಟಕದ ಮೊದಲ ಹಂತದ ಮತದಾನ: ಯಾವ-ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ವೋಟಿಂಗ್..?
ಉತ್ತರ ಕನ್ನಡದಲ್ಲಿ ಬಿಜೆಪಿಯಿಂದ ಅನಂತ್ ಕುಮಾರ್ ಹೆಗಡೆ ಸ್ಪರ್ಧೆ ಮಾಡಿದ್ದರೆ ಅತ್ತ ದೋಸ್ತಿ ಪಡೆಯಿಂದ ಆಬಂದ್ ಅಸ್ನೋಟಿಕರ್ ಅಖಾಡದಲ್ಲಿ ಇದ್ದಾರೆ. ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಏಪ್ರಿಲ್ 21 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ.