ಭುವನೇಶ್ವರ್(ಏ.18): ಚುನವಣಾ ಪ್ರಚಾರದ ವೇಳೆ ತಮ್ಮ ಸೂಟ್‌ಕೇಸ್ ತಪಾಸಣೆಗೆ ಮುಂದಾದ ಚುನವಣಾ ಅಧಿಕಾರಿಗಳ ಮೇಲೆ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಿಟ್ಟಾದ ಪ್ರಸಂಗ ನಡೆದಿದೆ.

ತಮ್ಮ ಬಳಿ ಇದ್ದ ಸೂಟ್‌ಕೇಸ್‌ನ್ನು ತಪಾಸಣೆ ಮಾಡಲು ಮುಂದಾದಾಗ, ಧರ್ಮೇಂದ್ರ ಪ್ರಧಾನ್ ಚುನಾವಣಾಧಿಕಾರಿಗಳ ಮೇಲೆ ಸಿಟ್ಟಾಗಿದ್ದಾರೆ.


ಚುನಾವಣಾಧಿಕಾರಿಗಳ ಮೇಲೆ ಹರಿಹಾಯ್ದ ಧರ್ಮೇಂದ್ರ ಪ್ರಧಾನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಕೇಂದ್ರ ಸಚಿವರ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಧರ್ಮೇಂದ್ರ ಪ್ರಧಾನ್ ವರ್ತನೆ ಖಂಡಿಸಿ ಬಿಜೆಡಿ ಮತ್ತು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೇಂದ್ರ ಸಚಿವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿವೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.