ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿಯೂ ಬಿಸಿಯಿದೆ. ಬಿಜೆಪಿಯ ಅನಂತ್ ಕುಮಾರ್ ಹೆಗಡೆ ಮತ್ತು ದೋಸ್ತಿ ಪಡೆಯ ಆನಂದ್ ಅಸ್ನೋಟಿಕರ್ ನಡುವೆ ನೇರ ಹಣಾಹಣಿ ಇದೆ.

ಕಾರವಾರ[ಏ. 16] ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಕುಂಬಳಕಾಯಿ, ನಿಂಬೆಹಣ್ಣಿಗೆ ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಹೋಲಿಸಿದ್ದಾರೆ.

18 ನೇ ತಾರೀಕಿನ ವರೆಗೆ ನಿಖಿಲ್ ಎಲ್ಲಿದ್ದೀಯ ಎಂದು ಮಂಡ್ಯದಲ್ಲಿ ಹುಡುಕುತ್ತಾರೆ? 18 ನೇ ತಾರೀಕಿನ ನಂತರ ಇಲ್ಲಿಗೆ ಬಂದು ಆನಂದ್ ಎಲ್ಲಿದ್ದೀಯಪ್ಪ ಎಂದು ಹುಡುಕುತ್ತಾರೆ? ಎಂದು ಲೇವಡಿ ಮಾಡಿದ್ದಾರೆ.

ಸಿದ್ದುಗೆ ಸಂವಿಧಾನವೇ ಗೊತ್ತಿಲ್ಲ, ಹೆಗಡೆ ಒಂದು ಸಾಲನ್ನೂ ಓದಿಲ್ಲ: ಬಿಜೆಪಿ ಅಭ್ಯರ್ಥಿ

18 ನೇ ತಾರೀಕಿನ ನಂತರ ಕುಂಬಳಕಾಯಿ, ನಿಂಬೆಹಣ್ಣುಗಳು ಬರುತ್ತವೆ ಎಂದು ಅಂಕೋಲಾದ ಪ್ರಚಾರ ಸಭೆಯಲ್ಲಿ ಅನಂತ್ ಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.