ಉಡುಪಿ{ಮಾ. 24]  ಏಳು ಮಂದಿ ಮೀನುಗಾರರು ನಾಪತ್ತೆಯಾಗಲು  ನೌಕಾಸೇನೆಯೇ ಕಾರಣ ಎಂದು ಉಡುಪಿ ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ ಮಾಡಿದ್ದಾರೆ.

ಇದಕ್ಕೆಲ್ಲ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಬೇಕು. ನೊಂದ ಮನೆಯವರ ನೋವಿಗೆ ಯಾರು ಉತ್ತರಿಸ್ತಾರೆ? ಮೀನುಗಾರರು ಬದುಕಿದ್ದಾರೋ ಸತ್ತಿದ್ದಾರೋ ಗೊತ್ತಿಲ್ಲ. ನಾಪತ್ತೆ ಹಿಂದೆ ನೌಕಾಸೇನೆಯವರ ಕೈವಾಡ ಇದೆ ಅನ್ನೋ ಸಂಶಯ ಇದೆ. ನೌಕಾಸೇನೆಯ ಶಿಪ್ ಬೋಟ್ ಗೆ ಅಪಘಾತ ಮಾಡಿದ ಸಂಭವ ಇದೆ ಎಂದರು.

ಆದರೂ ನೌಕಾಸೇನೆ ಹುಡುಕುವ ನಾಟಕ ಮಾಡಿದೆ. ಚುನಾವಣೆವರೆಗೆ ಈ ಸತ್ಯ ಮರೆಮಾಚುವ ಪ್ರಯತ್ನ‌ ಇದು. ಕೇಂದ್ರ ಸರ್ಕಾರ ಮತ್ತು ನಿರ್ಮಲಾ ಸೀತಾರಾನ್ ವೈಫಲ್ಯವೇ ಇದೆಲ್ಲದಕ್ಕೆ ಕಾರಣ.  ಮೀನುಗಾರ ಸಮುದಾಯಕ್ಕೆ ಕೇಂದ್ರ ಸರ್ಕಾರ ಏನೂ ಮಾಡಿಲ್ಲ. ಮೀನುಗಾರ ಅವಘಡದಲ್ಲಿ ಬಲಿಯಾದ್ರೆ ಕೇವಲ ಎರಡು ಲಕ್ಷ ಪರಿಹಾರ ಕೊಡ್ತಾರೆ ಎಂದು ಪ್ರಮೋದ್ ಹೇಳಿದರು.

ದರ್ಶನ್ ಮನೆ ಮೇಲೆ ಕಲ್ಲು ತೂರಾಟ: ನೈಟ್ ಡ್ರಾಮಾ ನಡೆಯದು ಎಂದ HDK

ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಓರ್ವ ಬ್ಲಾಕ್ ಮೇಲರ್. ತಂದೆಯ ಕಾಲದಿಂದ ವ್ಯವಹಾರ ಮಾಡ್ತಾ ಇದ್ದೇವೆ. ಸಿಂಡಿಕೇಟ್ ಬ್ಯಾಂಕ್ ನಲ್ಲೇ ನಿರಂತರ ವ್ಯವಹಾರ ಮಾಡಿದ್ದೇವೆ. ಸರಿಯಾದ ಆಸ್ತಿ ಅಡಮಾನ ಇಲ್ದೇ ಯಾವ ಬ್ಯಾಂಕೂ ಸಾಲ ಕೊಡಲ್ಲ. ಸ್ಥಳೀಯ ಬಿಜೆಪಿಯವರು ಅವರನ್ನು ಛೂ ಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಅದಕ್ಕೆ ಚುನಾವಣೆ ವೇಳೆ ಬರ್ತಾರೆ. ದುಡ್ಡಿಗಾಗಿ ಬ್ಲಾಕ್ ಮೇಲ್ ಮಾಡುವ ತಂತ್ರ ಬಳಸುತ್ತಾರೆ. ಟಿಜೆ ಅಬ್ರಾಹಾಂ ಎಲ್ಲರಿಗೂ ಗೊತ್ತಿರುವ ಬ್ಲಾಕ್ ಮೇಲರ್. ಸೂಕ್ತ ಕಾಲದಲ್ಲಿ ಅಬ್ರಾಹಾಂ ವಿರುದ್ದ ದಾಖಲೆ ಕೊಡ್ತೇನೆ. ವಂಚನೆ ಮಾಡಿದ್ರೆ ಕೇಂದ್ರ ಸರ್ಕಾರ ನನ್ನ ಮೇಲೆ ಕ್ರಮ‌ಕೈಗೊಳ್ಳಲಿ. ಅಬ್ರಾಹಾಂರದ್ದು ದುಡ್ಡು ಕೀಳುವ ಪ್ರಯತ್ನ. ನನ್ನ ಎದುರಾಳಿಗಳಿಂದ ದುಡ್ಡು ಪಡೆದಿರಬೇಕು ಅಬ್ರಾಹಾಂ ರನ್ನು ಜೈಲಿಗೆ ಹಾಕಿಸಲು ಕ್ರಿಮಿನಲ್ ಕೇಸ್ ಹಾಕಿಸುತ್ತೇನೆ. ಅಗತ್ಯ ಬಿದ್ರೆ 10 ಕೋಟಿ ರೂ. ಮಾನನಷ್ಟ ಮೊಕ್ಕದ್ದಮೆ ಹಾಕ್ತೇನೆ ಎಂದರು.

ನಾನು ಕಾಂಗ್ರೆಸ್ ಜೆಡಿಎಸ್ ನ ಜಂಟಿ ಅಭ್ಯರ್ಥಿ. ಸ್ಪರ್ಧೆ ಮಾಡುವ ಚಿಹ್ನೆ ಜೆಡಿಎಸ್. ನನ್ನ ಸ್ಪರ್ಧೆಯಿಂದ ಯಾರಿಗಾದ್ರೂ ತೊಂದ್ರೆ ಇದೇಯಾ? ತಾಂತ್ರಿಕ ವಿಷಯ ಜೆಡಿಎಸ್ ನೋಡಿಕೊಳ್ಳುತ್ತದೆ. ಎರಡೂ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಸೋಲಿಸಲು ಪಣ ತೊಟ್ಟಿದ್ದಾರೆ. ಭಿನ್ನಾಭಿಪ್ರಾಯ ಮರೆತು ಎರಡೂ ಪಕ್ಷಗಳ ಕಾರ್ಯಕರ್ತರು ಒಂದಾಗ್ತಾರೆ. ಶೋಭಾ ಸಂಸದೆಯಾಗಿ ಇದ್ದರೋ ಇಲ್ವೋ ಗೊತ್ತಾಗಲ್ಲ. ಬಿಜೆಪಿ ನಾಯಕರೇ ಗೋ ಬ್ಯಾಕ್ ಶೋಭಾ ಅಂತಾರೆ. ಈಗ ಮತದಾರರು ಗೋ ಬ್ಯಾಕ್ ಶೋಭಾ ಹೇಳಲು ತಯಾರಾಗಿದ್ದಾರೆ ಎಂಧರು.

ಗೋ ಬ್ಯಾಕ್ ಚಳವಳಿಯನ್ನು ಮತದಾರರು ಮುಂದುವರಿಸುತ್ತಾರೆ. ಸಚಿವನಾಗಿ ಉತ್ತಮ‌ ಕೆಲಸ ಮಾಡಿದ್ರೂ ವಿಧಾನಸಭಾ ಚುನಾವಣೆ ಸೋತೆ. ಅನಗತ್ಯ ಅಪಪ್ರಚಾರದಿಂದ ಸೋತಿದ್ದೇನೆ. ಶೋಭಾ ಕರಂದ್ಲಾಜೆ ಮರಳು ಸಮಸ್ಯೆ ಬಗೆಹರಿಸಲು ವಿಫಲರಾಗಿದ್ದಾರೆ.  ಮೋದಿಯೇ ಶೋಭಾಗೆ ಏಕೈಕ ಆಸರೆ. ಮೋದಿ ವಾರಣಾಸಿಯಲ್ಲಿ ಸ್ಪರ್ಧೆ ಮಾಡ್ತಾರೆ ಉಡುಪಿ ಚಿಕ್ಕಮಗಳೂರಿನಲ್ಲಿ ಅಲ್ಲ. ಬಿಜೆಪಿ ಕಾರ್ಯಕರ್ತರು, ಶಾಸಕರನ್ನೇ ಶೋಭಾ ಕಡೆಗಣಿಸಿದ್ದಾರೆ.  ಆದರೂ ಮೋದಿ ಅಲೆಯಲ್ಲಿ ಗೆಲ್ಲುವ ಭರವಸೆ ಹೊಂದಿದ್ದಾರೆ. ಆದರೆ ಬದಲಾವಣೆಯ ಗಾಳಿ ಬೀಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.