ಸ್ಟ್ರಾಂಗ್ ರೂಮ್‌ನಲ್ಲಿ ಫೋಟೋಗೆ ಪೋಸ್ ಕೊಟ್ಟ ಪೊಲಿಂಗ್ ಏಜೆಂಟ್| TRS ಪೊಲಿಂಗ್ ಏಜೆಂಟ್ ಮಾಡಿದ ಯಡವಟ್ಟು| ಸ್ಟ್ರಾಂಗ್ ರೂಮ್‌ನಲ್ಲಿ ಫೋಟೋ ಕ್ಲಿಕ್ಕಿಸಿ ಬಂಧನಕ್ಕೊಳಗಾದ ಎನ್. ವೆಂಕಟೇಶ್| ಇವಿಎಂ ಮತಯಂತ್ರಗಳನ್ನು ಇರಿಸಲಾಗುವ ಸ್ಟ್ರಾಂಗ್ ರೂಮ್‌ನಲ್ಲಿ ಫೋಟೋ|

ಹೈದರಾಬಾದ್(ಏ.14): ಇದೇ ಏ.11 ರಂದು ಲೋಕಸಭೆ ಚುನಾವಣೆಗೆ ಮತದಾನ ಮಾಡಿದ ತೆಲಂಗಾಣದಲ್ಲಿ, ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪೊಲಿಂಗ್ ಏಜೆಂಟ್‌ವೋರ್ವ ಇವಿಎಂ ಮತಯಂತ್ರಗಳನ್ನು ಇರಿಸಿದ್ದ ಸ್ಟ್ರಾಂಗ್ ರೂಮ್‌ನಲ್ಲಿ ಫೋಟೋಗೆ ಪೋಸ್ ನೀಡಿ ಬಂಧನಕ್ಕೊಳಗಾಗಿದ್ದಾನೆ.

ಇಲ್ಲಿನ ಮಲ್ಕಾಜ್ ಗಿರಿ ಲೋಕಸಭಾ ಕ್ಷೇತ್ರದ TRS ಅಭ್ಯರ್ಥಿ ಮರ್ರಿ ರಾಜಶೇಖರ್ ಅವರ ಪೊಲಿಂಗ್ ಏಜೆಂಟ್ ಆಗಿದ್ದ ಎನ್.ವೆಂಕಟೇಶ್, ಮತಯಂತ್ರಗಳನ್ನು ಇರಿಸಿದ್ದ ಸ್ಟ್ರಾಂಗ್ ರೂಮ್‌ನಲ್ಲಿ ಫೋಟೋ ಕ್ಲಿಕ್ಕಿಸಿದ್ದಾನೆ.

Scroll to load tweet…

ಮತಯಂತ್ರಗಳನ್ನು ಇರಿಸಲಾಗುವ ಕೋಣೆಯನ್ನು ಸ್ಟ್ರಾಂಗ್ ರೂಮ್‌ ಎಂದು ಕರೆಯಕಾಗುತ್ತದೆ. ಇಲ್ಲಿ ಯಾವುದೇ ಕಾರಣಕ್ಕೂ ಫೋಟೋ ಅಥವಾ ವಿಡಿಯೋ ಮಾಡುವ ಹಾಗಿಲ್ಲ. ಆದರೆ ನಿಯಮ ಮೀರಿ ಫೋಟೋ ಕ್ಲಿಕ್ಕಿಸಿರುವ ವೆಂಕಟೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.