Asianet Suvarna News Asianet Suvarna News

ಚುನಾವಣೆಯಲ್ಲಿ ಉಚಿತ ಪ್ರಯಾಣ ಆಮಿಷ ಕೊಟ್ರೆ ಹುಷಾರ್‌!

ಚುನಾವಣೆ ಹಿನ್ನಲೆಯಲ್ಲಿ ಮತದಾರರಿಗೆ ಉಚಿತ ಪ್ರಯಾಣದ ಆಮೀಷವೊಡ್ಡಬಾರದು | ಖಾಸಗಿ ವಾಹನಗಳ ಮೇಲೆ ಸಾರಿಗೆ ಇಲಾಖೆ ಕಣ್ಣು | 

Transportation Dept warns candidates not to Offer voters free ticket for voting
Author
Bengaluru, First Published Apr 2, 2019, 12:21 PM IST

ಬೆಂಗಳೂರು (ಏ. 02): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ನೆಲೆಸಿರುವ ಮತದಾರರನ್ನು ಉಚಿತ ಪ್ರಯಾಣದ ಆಮಿಷವೊಡ್ಡಿ ಕರೆದೊಯ್ಯುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ವ್ಯಾಪ್ತಿಗೆ ಬರುತ್ತದೆ.

ಈಗಾಗಲೇ ಸಾರಿಗೆ ಇಲಾಖೆ ಖಾಸಗಿ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ನೀತಿ ಸಂಹಿತೆ ಉಲ್ಲಂಘಿಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ಎಚ್ಚರಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಜತೆಗೆ ಈ ಬಾರಿ ಸುಮಾರು ಏಳು ಸಾವಿರ ಕಾಂಟ್ರಾಕ್ಟ್ ಕ್ಯಾರೇಜ್‌( ಒಪ್ಪಂದದ ವಾಹನ) ವಾಹನಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಈ ಸಂದರ್ಭದಲ್ಲಿ ದುರ್ಬಳಕೆ ಮಾಡಿಕೊಂಡು ಪ್ರಯಾಣ ದರ ಏರಿಸುವ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು. ಸಾರಿಗೆ ಇಲಾಖೆಯ ತನಿಖಾ ತಂಡಗಳು ಈಗಾಗಲೇ ವಾಹನಗಳ ತಪಾಸಣೆ ಕಾರ್ಯ ಆರಂಭಿಸಿವೆ ಎಂದಿದ್ದಾರೆ.

Follow Us:
Download App:
  • android
  • ios