ಲೋಕಸಭೆ ಚುನಾವಣೆಗೆ 6ನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣ| ಒಟ್ಟು 7 ಕ್ಷೇತ್ರದ 59 ಕ್ಷೇತ್ರಗಳ ಲೋಕಸಭಾ ಕ್ಷೇತ್ರಗಳಿಗೆ ಮತದಾನ| ಒಟ್ಟು 62.27 ರಷ್ಟು ಮತದಾನ| ವಿವಿಧ ರಾಜ್ಯಗಳ ಶೇಕಡಾವಾರು ಮತದಾನದ ಮಾಹಿತಿ ನೀಡಿದ ಚುನವಣಾ ಆಯೋಗ| ಪ.ಬಂಗಾಳದಲ್ಲಿ ಅತ್ಯಧಿಕ(ಶೇ.80.16)ಮತದಾನ| ಉತ್ತರಪ್ರದೇಶದಲ್ಲಿ ಅತ್ಯಂತ ಕಡಿಮೆ(ಶೇ.54.24)ಮತದಾನ|ಪ.ಬಂಗಾಳದ ಹಲವೆಡೆ ಹಿಂಸಾಚಾರ|

ನವದೆಹಲಿ(ಮೇ.12): ಲೋಕಸಭೆ ಚುನಾವಣೆಗೆ ಇಂದು 6ನೇ ಹಂತದ ಚುನಾವಣೆಗೆ ಇಂದು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಒಟ್ಟು 7 ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನವಾಗಿದೆ.

ಆರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆ ಸರಾಸರಿ 62.27% ಮತದಾನ ದಾಖಲಾಗಿದೆ.

Scroll to load tweet…

ವಿವಿಧ ರಾಜ್ಯಗಳಲ್ಲಿ ಶೇಕಡಾವಾರು ಮತದಾನದತ್ತ ಗಮನಹರಿಸುವುದಾದರೆ..

ಪ.ಬಂಗಾಳ-ಶೇ.80.16%
ಜಾರ್ಖಂಡ್-ಶೇ.64.50%
ಹರಿಯಾಣ-ಶೇ.65.48%
ಮಧ್ಯಪ್ರದೇಶ-ಶೇ.62.06%
ದೆಹಲಿ-ಶೇ.58.01%
ಬಿಹಾರ-ಶೇ.56.29%
ಉತ್ತರ ಪ್ರದೇಶ-ಶೇ.54.24%

6ನೇ ಹಂತದಲ್ಲಿ ಪ.ಬಂಗಾಳದ ಹಲವೆಡೆ ಹಿಂಸಾಚಾರ ನಡೆದಿದ್ದು, ಘಟಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಮೇಲೆ ಹಲ್ಲೆ ನಡೆಸಲಾಗಿದೆ. ಅಲ್ಲದೇ ಖರಿಯಾ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಆದರೆ ಉಳಿದೆಡೆ ಬಹುತೇಕ ಮತದಾನ ಶಾಂತಯುತವಾಗಿದ್ದು, ಏಳನೇ ಮತ್ತು ಕೊನೆಯ ಹಂತಕ್ಕೆ ಸಂಪೂರ್ಣ ಸಿದ್ಧತೆ ಪೂರ್ಣಗೊಂಡಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ