ಮೈಸೂರು[ಏ.09]: ಮಂಡ್ಯ ರಾಜಕೀಯ ರಂಗೇರುತ್ತಿದ್ದು ಅದೃಷ್ಟಯಾರಿಗಿದೆಯೋ ಅವರು ಗೆಲ್ಲುತ್ತಾರೆ ಎಂದು ‘ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಗೆಲ್ಲಬೇಕು ಎಂದು ನಾನು ಹೇಳುವುದಿಲ್ಲ. ಜನ ಯಾರನ್ನು ಬೆಂಬಲಿಸಲು ತೀರ್ಮಾನ ಮಾಡುತ್ತಾರೆಯೋ ಅವರು ಗೆಲ್ಲುತ್ತಾರೆ. ಕುಮಾರಸ್ವಾಮಿಯಾಗಲಿ, ಸುಮಲತಾ ಆಗಲಿ ನನ್ನನ್ನು ಭೇಟಿಯಾಗಿಲ್ಲ. ನನಗೆ ಇಬ್ಬರೂ ಇಷ್ಟಎಂದರು. ನನಗೆ ಅನಾರೋಗ್ಯ ಇರುವುದರಿಂದ ನಾನು ಯಾರ ಪರವಾಗಿಯೂ ಪ್ರಚಾರಕ್ಕೆ ಹೋಗುವುದಿಲ್ಲ. ನಾನು ಮತ್ತು ನನ್ನ ಮಗನೇ ನಮ್ಮ ಕಷ್ಟನಿಭಾಯಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸದ್ಯ ಮಂಡ್ಯ ಲೋಕಸಭಾ ಕ್ಷೇತ್ರ ಭಾರೀ ಕುತೀಹಲ ಮೂಡಿಸಿದ್ದು, ಸುಮಲತಾ ಹಾಗೂ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.