ನವದೆಹಲಿ[ಮೇ.08]: ದೇಶಾದ್ಯಂತ ಲೋಕಸಭಾ ಚುನಾವಣೆ ಭರಾಟೆ ನಡೆದಿದ್ದರೇ, ದೂರದ ಇಸ್ಲಾಮಾಬಾದ್‌ನಲ್ಲಿ ಕೆಲವರು ಭಾರತದಲ್ಲಿನ ತಮ್ಮ ಮತ ಚಲಾವಣೆ ನಡೆಸಿದ ಬಗ್ಗೆ ಸಂತಸವ ವ್ಯಕ್ತಪಡಿಸಿದ್ದಾರೆ.

ಇದೇನು, ಪಾಕ್‌ನಲ್ಲಿದ್ದುಕೊಂಡು ಮತದಾನವೇ?. ಹೌದು ಇಸ್ಲಾಮಾಬಾದ್‌ನ ಭಾರತೀಯ ರಾಯಭಾರ ಕಚೇರಿಯ 100ಕ್ಕೂ ಹೆಚ್ಚು ಸಿಬ್ಬಂದಿಗೆ ಈ ಬಾರಿ ವಿದ್ಯುನ್ಮಾತನ ಅಂಚೆಮತ ಚಲಾವಣೆಯ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಅವರೆಲ್ಲಾ ಮೇ 5ರಂದು ರಾಯಭಾರ ಕಚೇರಿ ಆವರಣದಲ್ಲಿ ಸ್ಥಾಪಿಸಿದ್ದ ಮತಗಟ್ಟೆಮೂಲಕ ತಮ್ಮ ಮತ ಚಲಾವಣೆ ಮಾಡಿದ್ದಾರೆ.

ಅಲ್ಲದೆ ಹಕ್ಕು ಚಲಾವಣೆಗೆ ಸಿಕ್ಕ ಸಂಭ್ರಮವನ್ನು ಟ್ವೀಟರ್‌ ಮೂಲಕ ಹಂಚಿಕೊಂಡಿದ್ದಾರೆ.