ಮಂಡ್ಯದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇದೇ ವೇಳೆ ತೇಜಸ್ವಿನಿ ಅನಂತ್ ಕುಮಾರ್ ನಿಖಿಲ್ ಕುಮಾರಸ್ವಾಮಿ ಕಾರ್ಯ ಮೆಚ್ಚಿ ಟ್ವೀಟ್ ಮಾಡಿದ್ದಾರೆ. 

ಬೆಂಗಳೂರು : ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಚುನಾವಣಾ ಪ್ರಚಾರದಲ್ಲಿ ಬ್ಯಸಿಯಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮತದಾರರ ಮನವೊಲಿಕೆಯಲ್ಲಿ ತೊಡಗಿರುವ ನಿಖಿಲ್ ಇತ್ತೀಚೆಗಷ್ಟೇ ಪ್ರಚಾರದ ವೇಳೆ ನಿಖಿಲ್ ಸ್ಟ್ರಾ ಇಲ್ಲದೇ ಎಳನೀರು ಕುಡಿದಿದ್ದು ಸಖತ್ ಸುದ್ದಿಯಾಗಿತ್ತು. 

ಈ ಬಗ್ಗೆ ಇದೀಗ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ನಿಖಿಲ್ ಗೌಡ ಸ್ಟ್ರಾ ಇಲ್ಲದೇ ಎಳನೀರು ಕುಡಿತಾನಂತೆ, ಕಾರಣ ಏನೇ ಇರಲಿ. ಇದನ್ನು ನಾವೆಲ್ಲಾ ಕಲಿಲೇಬೇಕು. 

ಯಾಕೆ ಗೊತ್ತಾ ? 

ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಸ್ಟ್ರಾ ಎಳನೀರು ಕುಡಿದು ಬಿಸಾಕ್ತಿವಿ. ಈ ಸ್ಟ್ರಾಗಳನ್ನು ಮರು ಸಂಸ್ಕರಣೆ ಮಾಡಲಾಗುವುದಿಲ್ಲ. ನೀರಿಗೋ, ಕಾಡಿಗೋ, ಭೂಮಿಗೋ ಸೇರಿ ಮೂಕಪ್ರಾಣಿಗಳಿಗೆ ತೊಂದರೆ, ಸ್ಟ್ರಾ ಉಪಯೋಗ ಬಿಡೋಣ ಎಂದು ಟ್ವೀಟ್ ಮಾಡಿದ್ದಾರೆ. 

Scroll to load tweet…