ಚೆನ್ನೈ[ಮಾ.28]: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳು ವಿಭಿನ್ನ ರೀತಿ ನಾಮಪತ್ರ ಸಲ್ಲಿಸಿ ಗಮನ ಸೆಳೆಯುತ್ತಾರೆ. ಅದೇ ರೀತಿ ಚೆನ್ನೈನ ಅಭ್ಯರ್ಥಿ ಕುಪ್ಪಾಲ್ಜಿ ದೇವಾದೋಸ್ ಎಂಬುವರು ಅಮ್ಮಾ ಮಕ್ಕಳ್ ನ್ಯಾಷನಲ್ ಪಕ್ಷದಿಂದ ನಾಮಪತ್ರ ಸಲ್ಲಿಸುವಾಗ ಠೇವಣಿ ₹25000 ಅನ್ನು ನಾಣ್ಯಗಳಲ್ಲಿ ನೀಡಿ ಗಮನ ಸೆಳೆದಿದ್ದಾರೆ.

ಕುಪ್ಪಾಲ್ಜಿ ಬೆಂಬಲಿಗರು ಪಾತ್ರೆಗಳಲ್ಲಿ 1, 2, 5, 10 ರು.ಗಳ ಚಿಲ್ಲರೆ ತುಂಬಿಕೊಂಡು ಬಂದಿದ್ದಾರೆ. ಈ ಚಿಲ್ಲರೆಗಳನ್ನೆಲ್ಲಾ ಎಣಿಸಿ ಚುನಾವಣಾಧಿಕಾರಿಗಳು ಸುಸ್ತಾಗಿ ಹೋಗಿದ್ದಾರೆ.

ಸದ್ಯ ಈ ಅಭ್ಯರ್ಥಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.