ನವದೆಹಲಿ(ಮೇ.08): ಪ್ರಧಾನಿ ನರೇಂದ್ರ ಮೋದಿ ‘ಪ್ರಜಾಪ್ರಭುತ್ವಕ್ಕೆ ಮಾಡಿದ ಕಪಾಳಮೋಕ್ಷ’ ಎಂದು ಹೇಳಿದ್ದ ಪ.ಬಾಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ, ಸುಷ್ಮಾ ಸ್ವರಾಜ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಸುಷ್ಮಾ, ಓರ್ವ ಮುಖ್ಯಮಂತ್ರಿಯಾಗಿ ಮಮತಾ ತಮ್ಮ ಎಲ್ಲೆಯನ್ನು ಮೀರಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುಷ್ಮಾ, ‘ನೀವು ಎಲ್ಲೆ ಮೀರಿ ಮಾತನಾಡುತ್ತಿದ್ದು, ಭವಿಷ್ಯದಲ್ಲಿ ರಾಜ್ಯದ ಬೇಕು ಬೇಡಗಳಿಗಾಗಿ ನೀವು ಮೋದಿ ಅವರೊಂದಿಗೆ ಮಾತನಾಡಲೇಬೇಕು ಎಂಬುದನ್ನು ನೆನಪಿಡಿ..’ಎಂದು ಎಚ್ಚರಿಸಿದ್ದಾರೆ.

ತಮ್ಮ ಟ್ವಿಟ್ನಲ್ಲಿ ಬಶೀರ್ ಭದ್ರ ಅವರ ಶಾಯರಿಯನ್ನು ಉಲ್ಲೇಖಿಸಿರುವ ಸುಷ್ಮಾ, ‘ಹಗತೆನ ಮಾಡಿ ಆದರೆ ನಾಳೆ ಒಂದು ವೇಳೆ ನಾವು ಗೆಳೆಯರಾದರೆ ಮುಜುಗರವಾಗಬಾರದು..’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಲೋಕಸಭೆ ಚುನಾವಣೆಗಾಗಿ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ