ತ್ರಿಶೂರ್[ಏ.20]: ಮಲಯಾಳಂ ಸಿನಿ ಕ್ಷೇತ್ರದ ಆ್ಯಕ್ಷನ್ ಕಿಂಗ್ ಎಂದೇ ಖ್ಯಾತಿ ಗಳಿಸಿರುವ ಸುರೇಶ್ ಗೋಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸದ್ಯ ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿರುವ ಮಾಲಿವುಡ್ ನಟ ಕಂ ರಾಜಕಾರಣಿಯ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಹೌದು ಪ್ರಚಾರದ ವೇಳೆ ಸುರೇಶ್ ಗೋಪಿ ಗರ್ಭಿಣಿ ಮಹಿಳೆಯೊಬ್ಬರ ಹೊಟ್ಟೆಯನ್ನು ಮುಟ್ಟಿ ಮಗುವಿಗೆ ಆಶೀರ್ವಾದ ನೀಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಒಂದೆಡೆ ಸುರೇಶ್ ಗೋಪಿಯವರ ಈ ನಡೆ ಚುನಾವಣಾ ಗಿಮಿಕ್ ಎಂದು ಪ್ರತಿಪಕ್ಷಗಳು ಬಣ್ಣಿಸುತ್ತಿದ್ದರೆ, ಮತ್ತೊಂದೆಡೆ ಅವರಿದನ್ನು ಮನಃ ಪೂರ್ವಕವಾಗಿ ಮಾಡಿದ್ದಾರೆ. ಅವರೊಬ್ಬ ಕಾಳಜಿ ಹಾಗೂ ಜನರನ್ನು ಪ್ರೀತಿಸುವ ವ್ಯಕ್ತಿ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಸುರೇಶ್ ಗೋಪಿಯವರ ಈ ನಡೆಯನ್ನು ಸಿಪಿಐ[ಎಂ] ತೀವ್ರವಾಗಿ ಖಂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಇದೊಂದು ಅನೈತಿಕ ಕೃತ್ಯ ಎನ್ನುವ ಮೂಲಕ ಖಂಡಿಸಿದ್ದಾರೆ.

ಅದೇನಿದ್ದರೂ ಸದ್ಯ ಮಲಯಾಳಂ ನಟನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಗರ್ಭಿಣಿ ಮಹಿಳೆ ಕೂಡಾ ತನ್ನ ಮಗುವನ್ನು ಸುರೇಶ್ ಗೋಪಿ ಆಶೀರ್ವದಿಸಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.