ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಹಲವು ಬಿಜೆಪಿ ನಾಯಕರು ಚುನಾವಣಾ ಕಣದಿಂದ ಹೊರಕ್ಕೆ ಉಳಿದಿದ್ದು, ಈ ಸಾಲಿಗೆ ಇದೀಗ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಕೂಡ ಸೇರಿದ್ದಾರೆ.

ನವದೆಹಲಿ :  ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಪ್ರಿಲ್ 12ಕ್ಕೆ ಸುಮಿತ್ರಾ ಮಹಾಜನ್ ವಯಸ್ಸಯ 76 ಆಗಲಿದ್ದು, ಈ ನಿಟ್ಟಿನಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಅಲ್ಲದೇ ಇಂದೋರ್ ಕ್ಷೇತ್ರದಿಂದ ಇದುವರೆಗೂ ಕೂಡ ಬಿಜೆಪಿ ಮಹಾಜನ್ ಹೆಸರು ಘೋಷಣೆಯಾಗಿಲ್ಲ. 

ಅಲ್ಲದೇ ಬಿಜೆಪಿಯಲ್ಲಿ ನಿಯಮವೊಂದನ್ನು ಕಾಯ್ದುಕೊಳ್ಳಲಾಗಿದ್ದು, 75 ವರ್ಷ ದಾಟಿದ ಯಾರಿಗೂ ಟಿಕೆಟ್ ನೀಡುವುದಿಲ್ಲ. 

ಅದರಂತೆ ಇದೀಗ ಸುಮಿತ್ರಾ ಮಹಾಜನ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಯಾವುದೇ ರೀತಿಯ ಅಸಮಾಧಾನವಿಲ್ಲದೇ ಪಕ್ಷದ ನಿರ್ಧಾರ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. 

ಈಗಾಗಲೇ 75 ವರ್ಷ ದಾಟಿದ ಅನೇಕ ಬಿಜೆಪಿ ನಾಯಕರಿಗೆ ಟಿಕೆಟ್ ದೊರಕಿಲ್ಲ. ಅದರಲ್ಲಿ ಹಿರಿಯ ನಾಯಕ ಎಲ್. ಅಡ್ವಾಣಿಯವರಿಗೂ ಈ ಬಾರಿ ಟಿಕೆಟ್ ದೊರಕಿದೆ.