ಶಿವಮೊಗ್ಗ : ಲೋಕಸಭಾ ಚುನಾವಣೆ ಕಣ ರಂಗೇರಿದ್ದು, ಶಿವಮೊಗ್ಗದಲ್ಲಿ ನಾಯಕರ ಪ್ರಚಾರ ಜೋರಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ರಾಘವೇಂದ್ರ ಪರ ಪ್ರಚಾರದಲ್ಲಿ ತೊಡಗಿದ್ದಾರೆ. 

ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿಯಾಗಿದೆ. 54 ಲಕ್ಷ ಕೋಟಿ ಇದ್ದ ಸಾಲವನ್ನು ತೀರಿಸಿ ಬೇರೆ ದೇಶಗಳಿಗೆ ಸಾಲ ಕೊಡುವಷ್ಟು ಪ್ರಮಾಣದಲ್ಲಿ ಬೆಳೆದಿದೆ ಎಂದರು. 

ಇನ್ನು ಇದೇ ವೇಳೆ ಮಂಡ್ಯ ಚುನಾವಣೆ ಮುಕ್ತಾಯವಾಗಿದ್ದು, ಮಂಡ್ಯದಲ್ಲಿ ಸುಮಲತಾ ಗೆಲುವು ಖಚಿತವಾಗಿದೆ. ಅವರ ಗೆಲುವು ಖಚಿತವಾಗುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಸೇಡಿನ ರಾಜಕಾರಣ ಆರಂಭಿಸಿದ್ದಾರೆ. ಸಂಯಮ ಕಳೆದುಕೊಂಡು ಮಾತನಾಡಲಾರಂಭಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು. 

ಅಲ್ಲದೇ  2 ವರ್ಷದ ಮೊದಲು ಪುಲ್ವಾಮಾ ದಾಳಿ ಬಗ್ಗೆ ಗೊತ್ತಿತ್ತು ಎಂದು ಹೇಳುವ ಅವರು ರಾಷ್ಟಪತಿಗಳಿಗೆ ಮಾಹಿತಿ ನೀಡಿ ತಪ್ಪಿಸಲು ಆಗುತ್ತಿರಲಿಲ್ಲವೇ ಎಂದು ಪ್ರಶ್ನೆ ಯಡಿಯೂರಪ್ಪ ಪ್ರಶ್ನೆ ಮಾಡಿದರು.