ಮಂಡ್ಯ[ಏ.10]: ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಅಂಬರೀಷ್‌ ಅವರನ್ನು ನೆನಪು ಮಾಡಿಕೊಂಡಿರುವುದಕ್ಕೆ ಅವರ ಪತ್ನಿ, ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ.

ಪಾಂಡವಪುರದಲ್ಲಿ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮೈಸೂರಿನಲ್ಲಿ ಪ್ರಧಾನಿ ಮೋದಿ ನನ್ನ ಪತಿ ಅಂಬರೀಷ್‌ ಅವರನ್ನು ನೆನಪು ಮಾಡಿಕೊಂಡಿರುವುದಕ್ಕೆ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ. ನನಗೆ ಹೇಳೋಕೆ ಪದಗಳೇ ಸಾಲಲ್ಲ. ಹೃದಯ ತುಂಬಿ ಕೃತಜ್ಞತೆ ಹೇಳುತ್ತಿದ್ದೇನೆ ಎಂದಿದ್ದಾರೆ.

ಸುಮಲತಾ ಪರ ಮೋದಿ ಬ್ಯಾಟಿಂಗ್ ನಂತರ ಹುಟ್ಟಿಕೊಂಡ ಪ್ರಶ್ನೆಗಳು

ಅಲ್ಲದೇ ಪ್ರಧಾನಿ ನೆನಪಿಸಿಕೊಳ್ಳುವುದು ಎಂದರೆ ಹೆಮ್ಮೆಯ ವಿಚಾರ. ಇದು ಅಂಬರೀಷ್‌ ಅವರ ಸಾಧನೆಯನ್ನು ಎತ್ತಿ ತೋರಿಸುತ್ತದೆ. ಇದು ನಮ್ಮ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬುತ್ತದೆ, ಅದು ನಮಗೆ ವರದಾನವಾಗುತ್ತದೆ ಎಂದು ಹೇಳಿದರು.