ಮಂಡ್ಯಕ್ಕೆ ಅಭ್ಯರ್ಥಿ ಹಾಕದೇ ಸುಮಲತಾಗೆ ಬಿಜೆಪಿ ಬೆಂಬಲ| ಬಿಜೆಪಿ ಬೆಂಬಲಕ್ಕೆ ಸುಮಲತಾ ಪ್ರತಿಕ್ರಿಯೆ ಹೇಗಿತ್ತು?| ಸುಮಲತಾಗೆ ರೈತ ಸಂಘದ ಬೆಂಬಲದ ಜೊತೆಗೆ ಬಿಜೆಪಿ ಬೆಂಬಲದ ಶಕ್ತಿ| ಬಿಜೆಪಿ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ ಸುಮಲತಾ ಅಂಬರೀಶ್|
ಬೆಂಗಳೂರು(ಮಾ.24): ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಹಾಕದೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಬೆಂಬಲ ನೀಡಿದೆ.
ಇನ್ನು ಬಿಜೆಪಿ ಬೆಂಬಲವನ್ನು ಸ್ವಾಗತಿಸಿರುವ ಸುಮಲತಾ ಅಂಬರೀಶ್, ಅಭ್ಯರ್ಥಿ ಹಾಕದೇ ಬೆಂಬಲ ನೀಡಿರುವ ಬಿಜೆಪಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
"
ಬಿಜೆಪಿ ಬೆಂಬಲದಿಂದ ತಮಗೆ ಮತ್ತಷ್ಟು ಶಕ್ತಿ ಬಂದಿದ್ದು, ರೈತ ಸಂಘದ ಬೆಂಬಲ ಕೂಡ ತಮ್ಮ ಆತ್ಮಸ್ಥೈರ್ಯ ಹೆಚ್ಚಿಸಿದೆ ಎಂದು ಸುಮಲತಾ ಹೇಳಿದ್ದಾರೆ.
‘ಇದು ನನ್ನ ಜೀವನದ ಹೊಸ ಚಾಪ್ಟರ್’ ಎಂದಿರುವ ಸುಮಲತಾ, ಮಂಡ್ಯ ಜಿಲ್ಲೆಯ ಜನರ ಆಶೀರ್ವಾದದಿಂದ ತಮ್ಮ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
