ಬೆಂಗಳೂರು, [ಏ.10]: ಬಹುಭಾಷಾ ನಟಿ ಹಾಗೂ ಕಾಂಗ್ರೆಸ್ ನಾಯಕಿ ಖುಷ್ಬೂ ಇಂದು [ಬುಧವಾರ] ಬೆಂಗಳೂರು ಕೇಂದ್ರದ ಮೈತ್ರಿ ಅಭ್ಯರ್ಥಿ ರಿಜ್ವಾನ್ ಹರ್ಷದ್ ಪರ ಭರ್ಜರಿ ಪ್ರಚಾರ ಮಾಡಿದರು.

ಈ ವೇಳೆ ಸುವರ್ಣ ನ್ಯೂಸ್ ಜತೆ ಮಾತನಾಡಿದ ಖುಷ್ಬೂ, ಮಂಡ್ಯ ರಾಜಕೀಯದ ಬಗ್ಗೆ ಪ್ರಸ್ತಾಪಿಸಿದರು.  ಮೈತ್ರಿ ಅಭ್ಯರ್ಥಿ ಬೆಂಬಲಿಸುವುದಾಗಿ ಹೇಳಿದ ಖುಷ್ಬೂ, ನಿಖಿಲ್ ಕುಮಾರಸ್ವಾಮಿಯನ್ನೇ ನಾನು ಬೆಂಬಲಿಸುತ್ತೇನೆ ಎಂದರು.

ಸುಮಲತಾ ಅಂಬರೀಶ್ ನನ್ನ ಆತ್ಮೀಯ ಗೆಳತಿ. ಆದರೆ ನಮ್ಮ ಮೈತ್ರಿ ಇರುವುದರಿಂದ ನಾನು ಸಿಎಂ ಪುತ್ರನನ್ನು ಬೆಂಬಲಿಸುತ್ತೇನೆ. ಸುಮಲತಾಗೆ ಒಳ್ಳೇಯದ್ದಾಗಲಿ ಎಂದು ಶುಭಹಾರೈಸಬಲ್ಲೆ ಅಷ್ಟೇ ಎಂದು ಹೇಳಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.