ಚಂಡೀಗಢ : ಮೋದಿ ಅವರು ಹಿಂದೊಮ್ಮೆ ಪಕೋಡಾ ಮಾರುವುದು ಕೂಡ ಒಂದು ಉದ್ಯೋಗ. ಅದರಿಂದಲೂ ಹಣ ಗಳಿಸಬಹುದು ಎಂದು ಹೇಳಿದ್ದು ನೆನಪಿರಹುದು. 

ಲೋಕಸಭಾ ಚುನಾವಣೆಯ ಕೊನೇ ಹಂತದ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ಮೋದಿಗೂ ಪಕೋಡಾ ಪ್ರತಿಭಟನೆಯ ಬಿಸಿ ತಟ್ಟಿದೆ. ಚಂಡೀಗಢದಲ್ಲಿ ಆಯೋಜಿಸಿದ್ದ  ಸಮಾವೇಶದಲ್ಲಿ ‘ಮೋದಿ ಪಕೋಡಾ’ ಎಂಬ ಹೆಸರಿನಲ್ಲಿ ಪಕೋಡಾ ಮಾರಾಟಕ್ಕೆ ಮುಂದಾಗಿದ್ದ 12 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.

ಆದರೆ, ವಿದ್ಯಾರ್ಥಿಗಳು ಮಾತ್ರ, ‘ಪದವಿ ಪೂರೈಸಿದ ನಮಗೆ ಪಕೋಡಾ ಯೋಜನೆಯಡಿ ಉದ್ಯೋಗ ನೀಡಿದ ಮೋದಿ ಸ್ವಾಗತಕ್ಕಾಗಿ ನಾವಿಲ್ಲಿ ಬಂದಿದ್ದೇವೆ ಎಂದು ಹೇಳಿದ್ದಾರೆ.