ಕೊಪ್ಪಳ, [ಏ.17]: ಶ್ರೀರಾಮುಲು ಒಳ್ಳೆ ನಾಯಕ. ಆದ್ರೆ ಬಿಜೆಪಿ ಶ್ರೀರಾಮಲುಗೆ ಬಿಜೆಪಿ  ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ

ಕೊಪ್ಪಳದಲ್ಲಿ ನಡೆದ ಪ್ರಚಾರದ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಶಿವರಾಜ್ ತಂಗಡಗಿ, ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಪರ ಮತಯಾಚಿಸಿದರು. ಈ ವೇಳೆ ಬಿಜೆಪಿ ಶಾಸಕ ಶ್ರೀರಾಮುಲು ಅವರನ್ನು ಗುಣಗಾನ ಮಾಡಿದರು.

ಶ್ರೀರಾಮಲುಗೆ ಬಿಜೆಪಿ  ಅನ್ಯಾಯ ಮಾಡಿದ್ದು, ವೋಟಿಗಾಗಿ ಶ್ರೀರಾಮಲು ಅವರನ್ನು ಬಲಿಪಶು ಮಾಡಿದೆ. ವೋಟು,ದುಡ್ಡಿಗಾಗಿ ರೆಡ್ಡಿ, ರಾಮಲು ಬೇಕು ಎಂದು ಹೇಳಿದರು.

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಜನಾರ್ಧನ ರೆಡ್ಡಿ ಕಾರಣ. ಶ್ರೀರಾಮಲು ಮುಗ್ದರು. ಅವರಿಗೆ ನಿಜವಾಗಿ ಅನ್ಯಾಯವಾಗಿದೆ ಎಂದು ಶ್ರೀರಾಮುಲು ಹಾಗೂ ಜನಾರ್ದನಾ ರೆಡ್ಡಿ ಅವರನ್ನು ಕೊಂಡಾಡಿದರು.

ನಾಯಕ ಸಮುದಾಯದ ಮತ ಸೆಳೆಯಲು ತಂಗಡಗಿ ಶ್ರೀರಾಮಲು ಹಸೆರು ಬಳಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.