ಬೀದರ್‌: ಏ.23 ರಂದು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನದ ಅನುಕೂಲಕ್ಕಾಗಿ ರಾಜಧಾನಿ ಬೆಂಗಳೂರಿನಿಂದ ಏ.22 ರಂದು ಕಲಬುರಗಿ ಮಾರ್ಗವಾಗಿ ಬೀದರ್‌ಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

ಏ.22ರಂದು ಯಶವಂತಪುರದಿಂದ ಸಂಜೆ 6.10ಕ್ಕೆ ಹೊರಡುವ ಈ ರೈಲು (ರೈಲು ಸಂ.06507) ಮರುದಿನ ಏ.23ರಂದು ಬೆಳಿಗ್ಗೆ 6.30ಕ್ಕೆ ಬೀದರ್‌ ತಲುಪಲಿದೆ. ತದನಂತರ ಸಂಜೆ 7ಕ್ಕೆ ಬೀದರ್‌ನಿಂದ ಹೊರಟು ಮರುದಿನ ಬೆಳಿಗ್ಗೆ 8.15ಕ್ಕೆ ಯಶವಂತಪುರ ತಲುಪಲಿದೆ.