ದಾವ​ಣ​ಗೆರೆ :  ಅನ್ಯಪಕ್ಷಗಳಲ್ಲಿರುವಂತೆ ಬಿಜೆಪಿಯ ಉನ್ನತ ಸ್ಥಾನಗಳಲ್ಲಿ ವಂಶಾಡಳಿತವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ವಾರಸುದಾರಿಕೆ ನೇರವಾಗಿ ಅವರ ಮಕ್ಕಳಿಗೆ ಹೋಗುವುದಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆ​ಪಿ​ಯಲ್ಲಿ ಆಂತ​ರಿಕ ಪ್ರಜಾ​ಪ್ರ​ಭು​ತ್ವ​ವಿದ್ದು, ಕುಟುಂಬದ ಆಸ್ತಿ​ಯಂತೆ ಅಧಿ​ಕಾರ ಹಸ್ತಾಂತ​ರ​ವಾ​ಗು​ವು​ದಿಲ್ಲ ಎಂದರು. ಶಾಸಕ, ಸಂಸ​ದ​ರಾ​ಗು​ವುದು ಬೇರೆ. ಆದರೆ ಅನ್ಯ ಪಕ್ಷಗಳ​ಲ್ಲಿ​ರು​ವಂತೆ ನಮ್ಮಲ್ಲಿ ಉನ್ನತ ಸ್ಥಾನ​ಗ​ಳ​ಲ್ಲಿ ವಂಶಾ​ಡ​ಳಿ​ತ​ವಿಲ್ಲ ಎಂದು ತಿಳಿಸಿದರು.

ಮೋದಿ ಬಳಿಕ ಯಾರು ಗೊತ್ತಿಲ್ಲ: ಕಾಂಗ್ರೆಸ್‌ ಪಕ್ಷ​ದಲ್ಲಿ ನೆಹರು, ಇಂದಿ​ರಾ​ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಇದೀಗ ಪ್ರಿಯಾಂಕ ಗಾಂಧಿ ಹೀಗೆ ಗಾಂಧಿ ಕುಟುಂಬದ ಸರ​ಣಿಯೇ ಇದೆ. ಆದರೆ, ಬಿಜೆ​ಪಿ​ಯಲ್ಲಿ ಅಂತಹ ಕುಟುಂಬ ಸರಣಿ ಇಲ್ಲ. ನರೇಂದ್ರ ಮೋದಿ ನಂತರ ಯಾರು ಅಂತಲೂ ಗೊತ್ತಿಲ್ಲ. ಬಿಜೆ​ಪಿ​ಯಲ್ಲಿ ಜನರ ಮಧ್ಯದಿಂದ ಬಂದ​ವರೇ ನಾಯ​ಕರು ಎಂದರು.

ಜೆಡಿಎಸ್‌ ಅತಿಯಾಸೆ ಗತಿಕೇಡು: ಜೆಡಿ​ಎಸ್‌ ಪಕ್ಷದ್ದು ಕುಟುಂಬ ಆಡ​ಳಿತ ವಿಸ್ತ​ರಿ​ಸುವ ದುರಾ​ಸೆಯ ಪರ​ಮಾ​ವಧಿ​ಯಾ​ಗಿದ್ದು, ಲೋಕ​ಸಭೆ ಚುನಾ​ವ​ಣೆ​ಯಲ್ಲಿ ಅತಿ​ಯಾಸೆ ಗಡಿ​ಗೇಡು ಎಂಬ ಸ್ಥಿತಿ​ಯನ್ನು ಜೆಡಿ​ಎಸ್‌ಗೆ ತಂದು ಕೊಡ​ಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯ​ದರ್ಶಿ ಸಿ.ಟಿ.​ರವಿ ಭವಿಷ್ಯ ನುಡಿ​ದರು. ಕುಟುಂಬ ಆಡ​ಳಿತ ವಿಸ್ತ​ರಿ​ಸ​ಬೇ​ಕೆಂಬ ಜೆಡಿ​ಎಸ್‌ ವರಿ​ಷ್ಠರ ದುರಾ​ಸೆ​ಯು ಅದೇ ಪಕ್ಷದ ಕಾರ್ಯ​ಕ​ರ್ತ​ರ ಅಸ​ಹ​ನೆ​ಗೆ ಕಾರಣವಾಗಿದ್ದು ಜೆಡಿಎಸ್‌ ಸೋಲಿಗೆ ಕಾರಣವಾಗಲಿದೆ ಎಂದರು.