ಭೋಪಾಲ್(ಮೇ.09): ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸ್ಮೃತಿ ಇರಾನಿಗೆ ಸಾರ್ವಜನಿಕ ಸಭೆಯಲ್ಲಿ ತೀವ್ರ ಮುಖಭಂಗವಾಗಿದೆ. ತಮ್ಮ ಭಾಷಣದಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಹೊಗಿ ಸ್ಮೃತಿ ಇರಾನಿ ಯಡವಟ್ಟು ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲಮನ್ನಾ ಆಗಿದೆಯೇ ಎಂದು ಜನರನ್ನು ಸ್ಮೃತಿ ಪ್ರಶ್ನಿಸಿದರು.

ಇದಕ್ಕೆ ಉತ್ತರವಾಗಿ ನೆರೆದ ಜನಸ್ತೋಮ ಹೋಗಯಾ, ಹೋಗಯಾ..(ಆಗಿದೆ, ಆಗಿದೆ) ಎಂದು ಕೂಗಿದೆ. ಇದರಿಂದ ಕೊಂಚ ಗಲಿಬಿಲಿಗೊಂಡ ಸ್ಮೃತಿ ಇರಾನಿ, ತಡವರಿಸಿಕೊಂಡು ನಂತರ ಮಾತು ಮುಂದುವರೆಸಿದರು.

ಸ್ಮೃತಿ ಇರಾನಿ ಪೇಚಿಗೆ ಸಿಲುಕಿದ ಪ್ರಸಂಗದ ವಿಡಿಯೋವನ್ನು ಮಧ್ಯಪ್ರದೇಶ ಕಾಂಗ್ರೆಸ್ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಜನತೆ ಈ ಸುಳ್ಳುಗಾರರಿಗೆ ದಿಟ್ಟ ಉತ್ತರ ನೀಡಲು ಪ್ರಾರಂಭಿಸಿದ್ದಾರೆ ಎಂದು ಹೇಳಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ