ಶಾಜಾಪುರ್(ಮೇ.17): ಪೂರ್ವ ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವೋಟಿಗಾಗಿ ಅಮೇಥಿಯಲ್ಲಿ ನಮಾಜ್ ಮಾಡುತ್ತಾರೆ ಮತ್ತು ಉಜ್ಜಯಿನಿಯಲ್ಲಿ ಪೂಜೆ ಮಾಡುತ್ತಾರೆ ಎಂದು ಅಮೇಥಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ಅಮೇಥಿಯಲ್ಲಿ  ನಮಾಜ್ ಮಾಡಿ, ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಹೋಗಿ ಪೂಜೆ ಮಾಡುತ್ತಾರೆ. ಈ ಎಲ್ಲಾ ನಾಟಕ ವೋಟಿಗಾಗಿ ಎಂದು ಸ್ಮೃತಿ ಇರಾನಿ ವ್ಯಂಗ್ಯವಾಡಿದ್ದಾರೆ.

ಸಹೋದರ ರಾಹುಲ್ ಗಾಂಧಿ ಗೆಲುವಿಗಾಗಿ ಪ್ರಿಯಾಂಕಾ ಗಾಂಧಿ ಅಮೇಥಿಯಲ್ಲಿ ಹರಸಾಹಸ ಪಡುತ್ತಿದ್ದು, ವೋಟಿಗಾಗಿ ಕಸರತ್ತು ನಡೆಸಿದ್ದಾರೆ ಎಂದು ಸ್ಮೃತಿ ಹರಿಹಾಯ್ದಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.