ಬೆಳಗಾವಿ ಬಿಜೆಪಿ ಅಭ್ಯರ್ಥಿ ವಿಪಕ್ಷಗಳಿಗೆ ಭರ್ಜರಿ ಶಾಕ್ ನೀಡಿದ್ದಾರೆ. ಗೆಲುವಿಗಾಗಿ  ಎದುರಾಳಿಗಳು ಮಾಡಿರುವ ತಂತ್ರವನ್ನು ಬುಡಬೇಲು ಮಾಡಿದ್ದಾರೆ.

ಬೆಳಗಾವಿ (ಏ. 08) ಬೆಳಗಾವಿ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಕಾಂಗ್ರೆಸ್ ಗೆ ಶಾಕ್ ನೀಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಂಗಡಿ, ಬಿಜೆಪಿಗೆ ಬೆಂಬಲಿಸಿ 6 ಜನ ಪಕ್ಷೇತರರು ತಮ್ಮ ಉಮೇದುವಾರಿಕೆ ಹಿಂದಕ್ಕೆ ಪಡೆಯುವಂತೆ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ನಾಲ್ವರು ಎಂ ಇ ಎಸ್ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ಮೋಹನ ಮೋರೆ, ಅಶೋಕ ಚೌಗಲೆ, ಗುರುಪುತ್ರಪ್ಪ ಕುಳ್ಳೂರ, ಸಂಗಮೇಶ ಚಿಕ್ಕನಗೌಡರ,ಸಂಜೀವ ಗಣಾಚಾರಿ, ಸರ್ವಜನತಾ ಪಾರ್ಟಿ ಅಶೋಕ ಹಂಜಿ ನಾಮಪತ್ರ ವಾಪಸ್ ಪಡೆದಿದ್ದು ಸುರೇಶ ಅಂಗಡಿಗೆ ಬೆಂಬಲ ಎನ್ನುವಂಥ ಮಾತನ್ನಾಡಿದ್ದಾರೆ.

ಮೋದಿ VS ಸಿದ್ದು, ರಾಮನ ಕರೆದುಕೊಂಡು ಪ್ರಚಾರಕ್ಕೆ ಹೊರಟ್ರಾ?

ಇದೆ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಂಗಡಿ, ಚುನಾವಣೆ ಎದುರಿಸಲು ಆಗದೇ ಎಂಇಎಸ್ ನಿಂದ 101 ಅಭ್ಯರ್ಥಿಗಳನ್ನ ಕಣಕ್ಕಿಳಿಸಿ ಚುನಾವಣೆ ಮುಂದೂಡಲು ಕುತಂತ್ರ ನಡೆಸಿತ್ತು. ಇನ್ನಾದ್ರು ಕಾಂಗ್ರೆಸ್ ಕುತಂತ್ರ ರಾಜಕಾರಣ ಬಿಡಬೇಕು ಎಂದು ಸಲಹೆ ನೀಡಿದರು.