Asianet Suvarna News Asianet Suvarna News

ಸದಾ+ಆನಂದ=ಸದಾನಂದ: ಕನ್ನಡ ವ್ಯಾಕರಣ ಪಠಿಸಿದ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವತ್ತು ಮತ್ತೊಮ್ಮೆ ಕನ್ನಡ ವ್ಯಾಕರಣ ಟೀಚರ್ ಆಗಿದ್ದಾರೆ. ಇತ್ತೀಚೆಗಷ್ಟೇ ಶ್ರೀರಾಮುಲುಗೆ ವ್ಯಾಕರಣ ಪಾಠ ಮಾಡಿದ್ದ ಸಿದ್ದು, ಈ ಸ್ಮೈಲ್ ಗೌಡ್ರನ್ನ ವ್ಯಾಕರಣ ಮೂಲಕ ವ್ಯಂಗ್ಯವಾಡಿದ್ದಾರೆ.

Siddaramaiah hits out at Bengaluru North BJP Candidate Sadananda Gowda
Author
Bengaluru, First Published Apr 5, 2019, 3:31 PM IST
  • Facebook
  • Twitter
  • Whatsapp

ಬೆಂಗಳೂರು, [ಏ.05]: ಸದಾ+ಆನಂದ=ಸದಾನಂದ. ಇದು ಸವರ್ಣದೀರ್ಘ ಸಂಧಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕನ್ನಡ ವ್ಯಾಕರಣವನ್ನು ಪಠಿಸಿದ್ದಾರೆ. 

 ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ ಪರ ಪ್ರಚಾರದ ವೇಳೆ , ಬಿಜೆಪಿ ಅಭ್ಯರ್ಥಿ ಸದಾನಂದ ಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಇಂದು [ಶುಕ್ರವಾರ] ಮಲ್ಲೇಶ್ವರಂನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಬಿಜೆಪಿ ನಾಯಕರು ಸದಾನಂದಗೌಡರಿಂದ ರೈಲ್ವೇ ಮಂತ್ರಿ ಸ್ಥಾನವನ್ನ ಇದ್ದಕ್ಕಿದ್ದಂತೆ ಕಿತ್ತುಕೊಂಡೊದ್ಯಾಕೆ..?  

ಈ ಬಗ್ಗೆ ಸದಾನಂದಗೌಡರನ್ನು ಕೇಳಿದರೆ ಅದಕ್ಕೂ ನಗುತ್ತಾರೆ. ಒಂದು ವೇಳೆ ಸದಾನಂದಗೌಡ ಸಮರ್ಥರಾಗಿದಿದ್ರೆ ಆ ಹುದ್ದೆಯನ್ನು ಕಿತ್ತುಕೊಳ್ಳುತ್ತಿದ್ರಾ..? ಎಂದು ಸದಾನಂದಗೌಡರ ವಿರುದ್ಧ ವ್ಯಂಗ್ಯವಾಡಿದರು.

 ಸದಾನಂದಗೌಡ ಪುತ್ತೂರು, ಸುಳ್ಯಾದವರು. ಅರೆಭಾಷೆ ಒಕ್ಕಲಿಗರು. ಅವರೊಬ್ಬ ಅಸಮರ್ಥ ವ್ಯಕ್ತಿ. ಆದ್ರೆ ಕೃಷ್ಣ ಬೈರೇಗೌಡ ಕ್ರಿಯಾಶೀಲ ವ್ಯಕ್ತಿ ಎಂದು ಕೃಷ್ಣ ಬೈರೇಗೌಡರನ್ನು ಹಾಡಿ ಹೊಗಳಿದರು.

Follow Us:
Download App:
  • android
  • ios