ಮೈಸೂರು[ಏ.15]: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಸ್ಪರ ಎದುರಾಳಿಗಳಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಿ.ಟಿ.ದೇವೇಗೌಡ ದಶಕಗಳ ನಂತರ ಒಂದಾಗಿ ಭಾನುವಾರ ಮೈತ್ರಿ ಅಭ್ಯರ್ಥಿ ವಿಜಯಶಂಕರ್‌ ಪರವಾಗಿ ಮತ ಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜಕೀಯ ಎಂಬುದು ಗಣಿತ ಅಲ್ಲ, ಅದೊಂದು ಕೆಮಿಸ್ಟ್ರಿ. 2 ಮತ್ತು 2 ಸೇರಿ 4 ಆಗಲ್ಲ. 2 ಪ್ಲಸ್‌ ಎಷ್ಟುಬೇಕಾದರೂ ಆಗಬಹುದು. ರಾಜಕೀಯದಲ್ಲಿ ಯಾರೂ ಪರ್ಮನೆಂಟ್‌ ಸ್ನೇಹಿತರು ಇರೋಲ್ಲ, ಪರ್ಮನೆಂಟ್‌ ವೈರಿಗಳೂ ಇರಲ್ಲ ಎಂದರು.

ನಾನು ಜಿ.ಟಿ. ದೇವೇಗೌಡ ಒಟ್ಟಿಗೆ ಪ್ರಚಾರಕ್ಕೆ ಹೋಗದಿದ್ದರೆ ಗೊಂದಲ ಏರ್ಪಡುತ್ತದೆ. ಅದು ಹಾಗೆಯೇ ಉಳಿಯುತ್ತದೆ ಎಂಬ ಕಾರಣಕ್ಕೆ ಒಗ್ಗಟ್ಟಾಗಿ ಬಂದಿದ್ದೇವೆ. ನಾನು ಜಿ.ಟಿ.ದೇವೇಗೌಡಗೆ ಹೇಳಿದ್ದೆ. ನಾನು ಬರ್ತೀನಿ, ನೀನು ಬಾ ಎಂದಿದ್ದೆ. ನಾವಿಬ್ಬರೂ ಬೆಂಗಳೂರಿನಲ್ಲಿ ಸಭೆ ಮಾಡಿದ್ದೆವು ಎಂದು ಹೇಳಿದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.