ಪಾಟ್ನಾ(ಮೇ.15): ತಾವು ಪಕ್ಷ ಬಿಡುವ ನಿರ್ಧಾರ ತಿಳಿಸಿದಾಗ ಬಿಜೆಪಿ ಭಿಷ್ಮ ಎಲ್.ಕೆ. ಅಡ್ವಾಣಿ ಕಣ್ಣಾಲಿಗಳು ತುಂಬಿ ಬಂದಿದ್ದವು ಎಂದು ಪಾಟ್ನಾ ಸಾಹೀಬ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ತಿಳಿಸಿದ್ದಾರೆ.

ಎರಡು ದಶಕಗಳಿಂದ ದುಡಿದ ಪಕ್ಷವನ್ನು ಬಿಟ್ಟು ಹೊರಡುವ ವೇಳೆ ಕೊನೆಯ ಬಾರಿಗೆ ಅಡ್ವಾಣಿ ಅವರನ್ನು ಭೇಟಿಯಾಗಲು ತೆರಳಿದ್ದೆ. ಈ ವೇಳೆ ಅವರು ಪಕ್ಷ ಬಿಡಬೇಡ ಎಂದು ಹೇಳಲಿಲ್ಲವಾದರೂ, ಅವರು ನನ್ನ ಮುಂದೆ ಕಣ್ಣೀರು ಹಾಕಿದ್ದರು ಎಂದು ಶತ್ರುಘ್ನ ಹೇಳಿದ್ದಾರೆ.

ಬಿಜೆಪಿ ತೊರೆಯುವುದು ತಮ್ಮ ಜೀವನದ ಅತ್ಯಂತ ಕಠಿಣ ನಿರ್ಧಾರಗಳಲ್ಲಿ ಒಂದಾಗಿತ್ತು ಎಂದಿರುವ ಶತ್ರುಘ್ನ, ಸರಿ ದಾರಿಯಲ್ಲಿ ಸಾಗಲು ಅಡ್ವಾಣಿ ಅವರ ಆಶೀರ್ವಾದ ಪಡೆದಿರುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಅತ್ಯಂತ ಹಿರಿಯ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಶತ್ರುಘ್ನ ಸಿನ್ಹಾ, ಮೋದಿ-ಶಾ ಕಾರ್ಯವೈಖರಿ ಖಂಡಿಸಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ