ಲಕ್ನೋ[ಏ.16]: ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜನಾಥ್ ಸಿಂಗ್ ಗೆ ಟಕ್ಕರ್ ನೀಡಲು ಮಹಾಮೈತ್ರಿಯ ಪರವಾಗಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪೂನಂ ಸಿನ್ಹಾ ಸಜ್ಜಾಗಿದ್ದಾರೆ. ಪೂನಂ ಸಿನ್ಹಾ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿರುವ ಶತ್ರುಘ್ನ ಸಿನ್ಹಾ ಮಡದಿ ಎಂಬುವುದು ಗಮನಾರ್ಹ.

ಮಂಗಳವಾರದಂದು ಲಕ್ನೋ ತಲುಪಿದ ಪೂನಂ ಸಾಮಾಜವಾದಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷದಿಂದ ನಾಮಪತ್ರ ಸ್ವೀಕರಿಸಿದ್ದು, ಏಪ್ರಿಲ್ 18ರಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಪೂನಂ ಪತಿ ನಟ ಶತ್ರುಘ್ನ ಸಿನ್ಹಾ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿದ್ದರು ಎಂಬುವುದು ಉಲ್ಲೇಖನೀಯ. ಅಲ್ಲದೇ ಉತ್ತರ ಪ್ರದೆಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಮಾಯಾವತಿ ನೇತೃತ್ವದ BSP ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಆದರೆ ಈ ಮೈತ್ರಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗಿಗೊಳಿಸಿಲ್ಲ ಎಂಬುವುದು ಗಮನಾರ್ಹ.