ನವದೆಹಲಿ[ಏ. 27]  ಸೇನೆಯಿಂದ ನಿವೃತ್ತಿ ಪಡೆದಿರುವ 7ಜನ ಅಧಿಕಾರಿಗಳು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿದ್ದಾರೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಮ್ಮುಖದಲ್ಲಿಯೇ ಬಿಜೆಪಿ ಸೇರಿದ್ದಾರೆ. ಸೈನ್ಯದಲ್ಲಿದ್ದು ಬಂದವರು ಪಕ್ಷ ಸೇರಿರುವುದು ಹೊಸ ಬಲ ತಂದಿದೆ. ದೇಶದ ರಕ್ಷಣಾ ವಿಚಾರಕ್ಕೆ ಸಂಬಂಧಿಸಿ ಇವರು ನಮಗೆ ಮಾರ್ಗದರ್ಶನ ನೀಡಬಲ್ಲರು  ಎಂದು ನಿರ್ಮಾಲಾ ಹೇಳಿದರು.

ಲೆಫ್ಟಿನೆಂಟ್ ಜನರಲ್ ಆಗಿದ್ದ ಜೆಬಿಎಸ್ ಯಾದವ್, ಎಸ್.ಕೆ.ಪಾಟ್ಯಾಲ್, ಮಿಲಿಟರಿ ಗುಪ್ತದಳದ ವಿಭಾಗದಲ್ಲಿ ಡೈರೆಕ್ಟರ್ ಜನರಲ್ ಆಗಿದ್ದ ಆರ್. ಎನ್.ಸಿಂಗ್, ಸುನೀತ್ ಕುಮಾರ್, ಆರ್.ಕೆ. ತ್ರಿಪಾಠಿ, ನವನೀತ್ ಮಾಗೋನ್ ಬಿಜೆಪಿ ಸೇರಿದ್ದಾರೆ.