ಹೈದರಾಬಾದ್, [ಮಾ.31]​:  ಹಾಲಿ ಲೋಕಸಭಾ ಚುನಾವಣೆಗೆ ಟಿಕೆಟ್​​ ಹಂಚಲು ಪಕ್ಷವು ಕೋಟ್ಯಂತರ ರೂಪಾಯಿ ಡಿಮ್ಯಾಂಡ್​ ಮಾಡುತ್ತಿದೆ ಎಂದು ಆರೋಪಿಸಿರುವ ಎಐಸಿಸಿ ಮಾಜಿ ಕಾರ್ಯದರ್ಶಿ ಸುಧಾಕರ್​ ರೆಡ್ಡಿ ರಾಜೀನಾಮೆ ನೀಡಿದ್ದಾರೆ.

 AICC ಮಾಜಿ ಕಾರ್ಯದರ್ಶಿ  ಹಾಗೂ ತೆಲಂಗಾಣ ಹಿರಿಯ ನಾಯಕ ಪೊಂಗುಲೇಟಿ ಸುಧಾಕರ್​ ರೆಡ್ಡಿ ಅವರು ಇಂದು [ಭಾನುವಾರ] ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. 

ಪಕ್ಷದ ಸಿದ್ಧಾಂತಗಳಿಗೆ ವಿರುದ್ಧವಾಗಿ ಕಾಂಗ್ರೆಸ್​ ನಡೆದುಕೊಳ್ಳುತ್ತಿದೆ. ಪಕ್ಷದ ಸಂಪ್ರದಾಯ-ಮೌಲ್ಯಗಳು ಬದಲಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2018ರಲ್ಲಿ ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ, ತದನಂತರ ಎಂಎಲ್​​ಸಿ, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಬದಲಾಗಿದೆ. ಇದನ್ನ ಪಕ್ಷದ ನಾಯಕರ ಗಮನಕ್ಕೆ ತರಲಾಗಿತ್ತು. 

ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಮುಂದೆ ಇದನ್ನು ಹೈಕಮಾಂಡ್​​ ಗಮನಕ್ಕೆ ತರಲು ಯತ್ನಿಸಿದೆ. ಆದ್ರೆ ಪಕ್ಷದ ಮಿಡ್ಲ್​ಮನ್​​ಗಳು ಇದಕ್ಕೆ ಅವಕಾಶ ಕಲ್ಪಿಸಲಿಲ್ಲ. ಇದರಿಂದ ಪಕ್ಷದ ಘನೆತೆಗೆ ಧಕ್ಕೆಯಾಗಿದೆ. ಹಾಗಾಗಿ ತಾನು ಅನಿವಾರ್ಯವಾಗಿ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.