ಝಾರ್‌ಗ್ರಾಮ್‌[ಮೇ.09]: ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ತಾರಾ ಪ್ರಚಾರಕಿ ಹಾಗೂ ನಟಿ ನುಸ್ರತ್‌ ಜಹಾನ್‌ ಜತೆಗೆ ಸೆಲ್ಫಿಗಾಗಿ ನೂರಾರು ಜನ ಒಂದೇ ಬಾರಿಗೆ ವೇದಿಕೆ ಏರಿದ ಪರಿಣಾಮ ವೇದಿಕೆಯೇ ಕುಸಿದು ಬಿದ್ದ ಘಟನೆ ಗೋಪಿಬಲ್ಲಭಪೋರ್‌ದಲ್ಲಿ ಬುಧವಾರ ನಡೆದಿದೆ.

ಈ ವೇದಿಕೆ ಅತಿ ಕಡಿಮೆ ಎತ್ತರವಿದ್ದ ಕಾರಣ ಈ ಘಟನೆಯಲ್ಲಿ ಯಾರಿಗೂ ಗಾಯ ಸಹ ಆಗಿಲ್ಲ. ಬಸಿರಾತ್‌ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿರುವ ನುಸ್ರತ್‌, ಮಂಗಳವಾರ ಅಲ್ಲಿನ ಟಿಎಂಸಿ ಅಭ್ಯರ್ಥಿ ಬಿರ್ಬಾ ಸೋರೆನ್‌ ಪರ ಪ್ರಚಾರ ನಡೆಸಿದ್ದರು.

ಈ ವೇಳೆ ವೇದಿಕೆ ಏರಿ ಮಾತನಾಡುತ್ತಿದ್ದಾಗ ಅಭಿಮಾನಿಗಳ ಹಿಂಡು ಸೆಲ್ಫಿಗಾಗಿ ಮುಗಿಬಿದ್ದು ಈ ಘಟನೆ ನಡೆದಿದೆ. ಈ ವೇಳೆ ನುಸ್ರತ್‌ ಕೂಡ ಮೈಕ್‌ ಹಿಡಿದುಕೊಂಡು ಬಚಾವಾಗಿದ್ದಾರೆ.