ನವದೆಹಲಿ[ಮೇ.05]: ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಖ್ಯಾತ ನಟ ಪ್ರಕಾಶ್‌ ರೈ, ತನ್ನ ಚುನಾವಣಾ ಪ್ರಚಾರವನ್ನು ಇದೀಗ ಬಿಹಾರದಿಂದ ದೆಹಲಿಗೂ ವಿಸ್ತರಿಸಿದ್ದಾರೆ.

ಈ ಹಿಂದೆ ಬಿಹಾರದ ಬೇಗುಸರಾಯ್‌ನಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ, ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಮಾಜಿ ಮುಖಂಡ ಕನ್ಹಯ್ಯಕುಮಾರ್‌ ಪರ ಪ್ರಚಾರ ನಡೆಸಿದ್ದ ಪ್ರಕಾಶ್‌ ರೈ, ಇದೀಗ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ (ಆಪ್‌) ಪರ ಪ್ರಚಾರ ಆರಂಭಿಸಿದ್ದಾರೆ.

ರೈ ಶನಿವಾರದಿಂದ ಒಂದು ವಾರಗಳ ಕಾಲ ದೆಹಲಿಯ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ದೇಶದಲ್ಲಿ ಕೋಮು ಮತ್ತು ದ್ವೇಷದ ರಾಜಕೀಯದಿಂದಾಗಿ ಅವನತಿಯ ಹಂತದಲ್ಲಿರುವ ಪ್ರಜಾಪ್ರಭುತ್ವದ ಮರುಜಾರಿಗಾಗಿ ನಾವೆಲ್ಲಾ ಒಂದಾಗಬೇಕಿದೆ. ಈ ಕಾರಣಕ್ಕಾಗಿಯೇ ಹೊಸ ಚಿಂತನೆ, ಹೊಸ ವ್ಯಕ್ತಿತ್ವಕ್ಕೆ ಬೆಂಬಲ ನೀಡುತ್ತಿದ್ದೇನೆ ಎಂದು ರೈ ಹೇಳಿದ್ದಾರೆ.