ಬೆಂಗಳೂರು :  ಲೋಕಸಭಾ ಚುನಾವಣಾ ಸಮರವು ಕ್ಲೈಮ್ಯಾಕ್ಸ್‌ ಹಂತ ತಲುಪಿರುವ ಹೊತ್ತಿನಲ್ಲೇ ಚಿತ್ರನಟಿ ರಾಗಿಣಿ ಅವರು ಬಿಜೆಪಿ ಮೂಲಕ ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. 

ಚುನಾವಣಾ ಅಖಾಡದಲ್ಲಿ ಮತ ಸೆಳೆಯಲು ಸ್ಟಾರ್‌ ನಟಿಯನ್ನು ಕರೆತರಲು ಬಿಜೆಪಿ ನಾಯಕರು ಉತ್ಸುಕತೆ ತೋರಿಸಿದ್ದಾರೆ. ಈಗಾಗಲೇ ಪಕ್ಷ ಸೇರ್ಪಡೆ ಸಂಬಂಧ ರಾಗಿಣಿ ಅವರೊಂದಿಗೆ ಸಹ ಬಿಜೆಪಿ ಮುಖಂಡರು ಮಾತುಕತೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಈ ಬೆಳವಣಿಗೆಗೆ ಸ್ಪಷ್ಟತೆ ಸಿಗಲಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಗಿಣಿ, ನಾನು ರಾಜಕೀಯಕ್ಕೆ ಸೇರುವ ಬಗ್ಗೆ ಇನ್ನೂ ಯೋಚನೆ ಹಂತದಲ್ಲಿದ್ದೇನೆ. ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.