ವಾರಾಣಸಿ[ಏ.29]: ಸಮಾಜವಾದಿ ಪಾರ್ಟಿ ಬಹುದೊಡ್ಡ ಹೆಜ್ಜೆಯೊಂದನ್ನಿರಿಸಿದೆ. ಪಕ್ಷವು ವಾರಾಣಸಿ ಕ್ಷೇತ್ರದಿಂದ ಮಾಜಿ BSF ಯೋಧ ತೇಜ್ ಬಹದ್ದೂರ್ ಯಾದವ್ ರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಸಮಾಜವಾದಿ ಪಕ್ಷ ಇದಕ್ಕೂ ಮೊದಲು ಈ ಕ್ಷೇತ್ರದಿಂದ ಶಾಲಿನಿ ಯಾದವ್ ರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿತ್ತು. ತೇಜ್ ಬಹದ್ದೂರ್ ಇಲ್ಲಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 

"

ಸೈನ್ಯದಲ್ಲಿ ನೀಡಲಾಗುವ ಕಳಪೆ ಆಹಾರ ಹಾಗೂ ಸೌಲಭ್ಯದ ಕುರಿತಾಗಿ ವಿಡಿಯೋ ಮಾಡಿ ದೇಶದಾದ್ಯಂತ ಸದ್ದು ಮಾಡಿದ್ದ ತೇಜ್ ಬಹದ್ದೂರ್ ಬಳಿಕ ಅಮಾನತ್ತಾಗಿದ್ದರು. ಇದಾಧ ಬಳಿಕ ಲೋಕಸಭಾ ಚುನಾವಣೆ ವೇಳೆ ಮತ್ತೆ ಮಾಧ್ಯಮದೆದುರು ಕಾಣಿಸಿಕೊಂಡಿದ್ದ ತೇಜ್ ಯಾದವ್ ತಾನು ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುತ್ತೇನೆ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದಿದ್ದರು. ಇದರ ಅನ್ವಯ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದರು. ಆದರೀಗ ಇದ್ದಕ್ಕಿದ್ದಂತೆ ಸಮಾಜವಾದಿ ಪಾರ್ಟಿ ವಾರಾಣಸಿಯ ತನ್ನ ಅಭ್ಯರ್ಥಿಯನ್ನು ಬದಕಲಾಯಿಸಿದೆ ಹಾಗೂ ಶಾಲಿನಿ ಯಾದವ್ ಬದಲಾಗಿ ತೇಜ್ ಯಾದವ್ ಗೆ ಟಿಕೆಟ್ ನೀಡುವುದಾಗಿ ಘೋಷಿಸಿದೆ.

ಪ್ರಧಾನಿ ಮೋದಿ ವಾರಾಣಸಿಯಿಂದ ಸ್ಪರ್ಧಿಸಿ ಸಂಸತ್ತಿಗೆ ಪ್ರವೇಶಿಸಿದ್ದರು. ಈ ಬಾರಿಯೂ ವಾರಾಣಸಿಯಿಂದಲೇ ಸ್ಪರ್ಧಿಸಲಿರುವ ಪ್ರಧಾನಿ ಮೋದಿ ಏಪ್ರಿಲ್ 26ರಂದು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಕರ್ನಾಟಕದ ಇಬ್ಬರು ಮೋದಿ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾಋಎ ಎಂಬುವುದು ಉಲ್ಲೇಖನೀಯ.