ನವದೆಹಲಿ[ಮೇ.13]: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾವ ರಾಬರ್ಟ್‌ ವಾದ್ರಾ ಅವರು ದೆಹಲಿಯಲ್ಲಿ ಭಾನುವಾರ ಮತ ಚಲಾಯಿಸಿದರು. ಅಲ್ಲದೆ, ತಮ್ಮ ಹಕ್ಕು ಚಲಾವಣೆ ಬಳಿಕ ಎಲ್ಲರಂತೆ ವಾದ್ರಾ ಸಹ ಇಂಕ್‌ ಹಚ್ಚಲಾದ ಬೆರಳಿನ ಜೊತೆ ಸೆಲ್ಫೀ ಹಾಗೂ ಮತದಾನದ ಜಾಗೃತಿಯ ಕುರಿತಾದ ಟ್ವೀಟ್‌ವೊಂದನ್ನು ಮಾಡಿದ್ದಾರೆ.

ಆದರೆ, ತಮ್ಮ ಟ್ವೀಟ್‌ನ ಕೊನೇ ಭಾಗದಲ್ಲಿ ಭಾರತ ಧ್ವಜದ ಬದಲಿಗೆ ದಕ್ಷಿಣ ಅಮೆರಿಕದ ಪೆರುಗ್ವೆ ರಾಷ್ಟ್ರದ ಧ್ವಜದ ಇಮೋಜಿ ಬಳಸುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಅಲ್ಲದೆ, ಹಲವು ಟ್ವೀಟಿಗರು ವಾದ್ರಾ ಅವರಿಗೆ ಭಾರತದ ತ್ರಿವರ್ಣ ಧ್ವಜ ಯಾವುದು ಎಂಬುದೇ ಗೊತ್ತಿಲ್ಲ ಎಂದು ಕಾಲೆಳೆದಿದ್ದಾರೆ.

ಕೊನೆಗೆ, ತಮ್ಮ ತಪ್ಪನ್ನು ಮನಗಂಡ ವಾದ್ರಾ, ಅದನ್ನು ಡಿಲೀಟ್‌ ಮಾಡಿ ಭಾರತದ ಅಸಲಿ ಬಾವುಟ ಇರುವ ಮತ್ತೊಂದು ಟ್ವೀಟ್‌ ಮಾಡಿದ್ದಾರೆ.