ಭಾರತೀಯ ಭೂಸೇನೆಯ ನಿವೃತ್ತ ಕ್ಯಾಪ್ಟನ್ ಶಾಲಿನಿ ಸಿಂಗ್ ಆಪ್ ಪಕ್ಷಕ್ಕೆ ಸೇರ್ಪಡೆ| ಶಾಲಿನಿ ಸಿಂಗ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಸಂಜಯ್ ಸಿಂಗ್| ಆಪ್ ಕಾರ್ಯವೈಕರಿ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ ಶಾಲಿನಿ ಸಿಂಗ್|
ನವದೆಹಲಿ(ಏ.02): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಭೂಸೇನೆಯ ನಿವೃತ್ತ ಕ್ಯಾಪ್ಟನ್ ಶಾಲಿನಿ ಸಿಂಗ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
Scroll to load tweet…
ಈ ಕುರಿತು ಮಾಹಿತಿ ನೀಡಿರುವ ಆಪ್ ರಾಷ್ಟ್ರೀಯ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಕ್ಯಾ. ಶಾಲಿನಿ ಸಿಂಗ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಸಂತೋಷವಾಗುತ್ತಿದೆ ಎಂದು ಹೇಳಿದರು.
Scroll to load tweet…
ಈ ವೇಳೆ ಮಾತನಾಡಿದ ಶಾಲಿನಿ ಸಿಂಗ್, 'ಸ್ವಹಿತಕ್ಕಿಂತ ದೇಶದ ಹಿತ ಮೊದಲು ಎಂದು ಬಯಸುವ ಕುಟುಂಬದ ಹಿನ್ನೆಲೆಯಿಂದ ಬಂದಿರುವ ನಾನು, ದೆಹಲಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಮ್ ಆದ್ಮಿ ಸರ್ಕಾರದ ಕಾರ್ಯವೈಖರಿಯನ್ನು ಕಂಡು ಪಕ್ಷಕ್ಕೆ ಸೇರ್ಪಡಯಾಗಿರುವೆ' ಎಂದು ಹೇಳಿದರು.
Scroll to load tweet…
ಶಾಲಿನಿ ಸಿಂಗ್ ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದಲ್ಲದೇ, ಮಿಸೆಸ್ ಇಂಡಿಯಾ ಆಗಿಯೂ ಖ್ಯಾತಿ ಗಳಿಸಿದ್ದರು.
Scroll to load tweet…
