Asianet Suvarna News Asianet Suvarna News

ಬೆಂಗ್ಳೂರೇಕೆ ಯಾವಾಗ್ಲೂ ವೋಟ್ ಮಾಡಲ್ಲ?: ಕಾರಣ ಒಂದೆರಡಲ್ಲ!

ಮೊದಲ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಿದ ಕರ್ನಾಟಕ| ರಾಜ್ಯದಲ್ಲಿ ಒಟ್ಟು 14 ಕ್ಷೇತ್ರಗಳಲ್ಲಿ ಶೇ.67.67ರಷ್ಟು ಮತದಾನ| ರಾಜಧಾನಿ ಬೆಮಗಳೂರಿನಲ್ಲಿ ಅತೀ ಕಡಿಮೆ ಪ್ರಮಾಣದ ಮತದಾನ| ಬೆಂಗಳೂರಿನಲ್ಲಿ ಮತದಾನ ಪ್ರಮಾಣದಲ್ಲಿ ಇಳಿಕೆಗೆ ಕಾರಣವೇನು?| ಮತ ಪ್ರಮಾಣ ಇಳಿಕೆಗೆ ಮತದಾನಕ್ಕೆ ನಿರುತ್ಸಾಹ ಒಂದೇ ಕಾರಣವೇ?| ಒಂದಕ್ಕಿಂತ ಹೆಚ್ಚು ಕ್ಷೇತ್ರದ ವೋಟರ್ ಐಡಿ ಹೊಂದಿರುವ ಸಮಸ್ಯೆಗೆ ಪರಿಹಾರವೇನು?| ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವುದರಿಂದ ಹಲವು ಸಮಸ್ಯೆಗೆ ಪರಿಹಾರ?|

Reason Behind Less Percentage Voting In Bengalluru
Author
Bengaluru, First Published Apr 19, 2019, 2:30 PM IST

ಬೆಂಗಳೂರು(ಏ.19): ಸ್ವಾತಂತ್ರ್ಯೋತ್ತರ ಭಾರತದ ಚುನಾವಣಾ ಇತಿಹಾಸದಲ್ಲಿ ಅತ್ಯಂತ ಮಹತ್ವದ ಚುನಾವಣೆ ಎಂದೇ ಬಿಂಬಿತವಾಗಿರುವ 17ನೇ ಲೋಕಸಭೆ ಚುನಾವಣೆ ಪ್ರತಿಯೊಬ್ಬ ದೇಶವಾಸಿಯ ಕಣ್ಣ ಮುಂದಿದೆ.

ಭವ್ಯ, ಸಧೃಢ ಭಾರತದ ನಿರ್ಮಾಣಕ್ಕಾಗಿ ಮತದಾನವೇ ಪ್ರಮುಖ ಅಸ್ತ್ರವಾಗಿದ್ದು, ನಾವೇನೂ ನಿರ್ಣಯ ಕೈಗೊಳ್ಳಲಿದ್ದೇವೆ ಎಂಬುದನ್ನು ಭಾರತವೂ ಕುತೂಹಲದಿಂದ ಎದುರು ನೋಡುತ್ತಿದೆ.

ಅದರಂತೆ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಇದೀಗ ಆರಂಭವಾಗಿದ್ದು, ನಿನ್ನೆ(ಏ.18)ದೇಶ ಎರಡನೇಯ ಮತ್ತು ಕರ್ನಾಟಕ ಮೊದಲನೆಯ ಹಂತದ ಮತದಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

ಆದರೆ ಶೇಕಡಾವಾರು ಮತದಾನದಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿರುವುದು, ಭವ್ಯ ಭಾರತದ ಕನಸು ಕಂಡಿರುವ ಮನಸ್ಸುಗಳನ್ನು ನಿಜಕ್ಕೂ ಘಾಸಿಗೊಳಿಸಿದೆ.

ನಿನ್ನೆ(ಏ.18)ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಒಟ್ಟಾರೆ ಶೇಕಡಾವಾರು ಮತದಾನ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

Reason Behind Less Percentage Voting In Bengalluru

ಮೊದಲ ಹಂತದ ಚುನಾವಣೆಯಲ್ಲಿ ಕರ್ನಾಟಕದ 14 ಕ್ಷೇತ್ರಗಳಲ್ಲಿ ಶೇ.67.67ರಷ್ಟು ಮತದಾನವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಶೇ.50ರ ಆಸುಪಾಸಿನಲ್ಲಿ ಮತದಾನವಾಗಿರುವುದು ಪ್ರಜಾಪ್ರಭುತ್ವ ಪ್ರೀಯರನ್ನು ದಿಗ್ಭ್ರಾಂತಗೊಳಿಸಿದೆ.

1.ಬೆಂಗಳೂರು ಕೇಂದ್ರ-ಶೇ.55.64

2.ಬೆಂಗಳೂರು ಉತ್ತರ-ಶೇ.56.53

3.ಬೆಂಗಳೂರು ದಕ್ಷಿಣ-ಶೇ.55.75

4. ಬೆಂಗಳೂರು ಗ್ರಾಮಾಂತರ-ಶೇ.66.45

ಶೇಕಡಾವಾರು ಮತದಾನ ಕಡಿಮೆಯಾಗಲು ಕಾರಣವೇನು?:

ಚುನಾವಣೆಗಳಲ್ಲಿ ಶೇಕಡಾವಾರು ಮತದಾನ ಕಡಿಮೆಯಾಗಲು ಕಾರಣವೇನು ಎಂಬುದನ್ನು ಹಲವರು ತಮ್ಮದೇ ಆದ ರೀತಿಯಲ್ಲಿ ಅವಲೋಕಿಸುತ್ತಿದ್ದಾರೆ. ಈ ಕುರಿತು ಚುನಾವಣಾ ಆಯೋಗ ಕೂಡ ಗಂಭೀರವಾಗಿರುವುದು ಎದ್ದು ಕಾಣುತ್ತಿದೆ.

ಮತದಾನದ ಕುರಿತು ಜನರಲ್ಲಿ ನಿರಾಸಕ್ತಿ ಇದೆ ಎಂಬ ವಾದವನ್ನು ಬಹುತೇಕರು ಒಪ್ಪುತ್ತಾರೆ. ಮತದಾನ ದಿನವನ್ನು ರಜಾ ದಿನವನ್ನಾಗಿ ಕಾಣುವ ಮನಸ್ಥಿತಿ ಇದಕ್ಕೆ ಬಹುತೇಕವಾಗಿ ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುವ ಸತ್ಯ.

ನಗರದ ಕೆಲವು ಕಡೆ 35-40 ವಯಸ್ಸಿನ ಮತದಾರರು ಇದೇ ಮೊದಲ ಬಾರಿಗೆ ಮತದಾನ ಮಾಡಿದ ಉದಾಹರಣೆಗೂ ನಮ್ಮ ಮುಂದಿದೆ.

ಆದರೆ ಈ ಕುರಿತು ಇನ್ನಷ್ಟು ಆಳವಾಗಿ ಇಣುಕಿ ನೋಡಿದಾಗ ಇನ್ನೂ ಹಲವು ಕಾರಣಗಳು ಕಾಣಸಿಗುತ್ತವೆ. ಹಾಗಾದರೆ ಶೇಕಡಾವಾರು ಮತದಾನದ ಪ್ರಮಾಣ ಇಳಿಕೆಯಾಗಲು ಕಾರಣಗಳನ್ನು ಕೆದಕುತ್ತಾ ಹೋದಂತೆ..

ಬೆಂಗಳೂರು ನಗರದಲ್ಲಿ ಒಂದಕ್ಕಿಂತ ಹೆಚ್ಚು ವೋಟರ್ ಐಡಿ ಹೊಂದಿದವರ ಸಂಖ್ಯೆಗೇನೂ ಕಡಿಮೆಯಿಲ್ಲ. ಉದಾಹರಣೆಗೆ ಕೆಲ ಸಮಯದ ಹಿಂದೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ವಾಸವಿರುವ ವ್ಯಕ್ತಿ ಮುಂದೆ ಬೆಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ದಕ್ಷಿಣಕ್ಕೆ ವಲಸೆ ಹೊದಾಗ ಹೊಸ ವೋಟರ್ ಐಡಿ ಪಡೆಯವುದು ಸಾಮಾನ್ಯ.

ವೋಟರ್ ಐಡಿ ಪಡೆಯುವ ನಿಯಮಗಳ ಅನುಸಾರ ವೋಟರ್ ಐಡಿ ಬದಲಿಸುವ ಪ್ರಕ್ರಿಯೆಗಿಂತ ಹೊಸ ವೋಟರ್ ಐಡಿ ಪಡೆಯವುದು ತುಂಬ ಸುಲಭ. ಹೀಗಾಗಿ ಬೆಂಗಳೂರಿನ ಶೇ.15ರಷ್ಟು ಜನರ ಬಳಿಯಾದರೂ ಬೇರೆ ಬೇರೆ ಕ್ಷೇತ್ರಗಳ ಒಂದಕ್ಕಿಂತ ಹೆಚ್ಚು ವೋಟರ್ ಐಡಿಗಳಿವೆ ಎಂದು ಅಂದಾಜಿಸಲಾಗಿದೆ.

ಆದರೆ ಒಂದಕ್ಕಿಂತ ಹೆಚ್ಚು ವೋಟರ್ ಐಡಿ ಇದ್ದರೂ ವ್ಯಕ್ತಿ ಒಂದೇ ಕ್ಷೇತ್ರದಲ್ಲಿ ಮತದಾನ ಮಾಡುವುದರಿಂದ ಉಳಿದ ಒಂದು ಅಥವಾ ಎರಡು ಕ್ಷೇತ್ರಗಳಲ್ಲಿ ಆತನ ಗೈರು ಹಾಜರಿ ಶೇಕಡಾವಾರು ಮತದಾನದ ಪ್ರಮಾಣದ ಮೇಲೆ ಪರಿಣಾಮ ಬೀರುತ್ತಿದೆ ಎಂಬದು ಒಂದು ವಾದವಾಗಿದೆ.

ಇಷ್ಟೇ ಅಲ್ಲದೇ ರಾಜಧಾನಿಯಲ್ಲಿ ಹೊರ ರಾಜ್ಯ ಮತ್ತು ಪರ ಜಿಲ್ಲೆಗಳ ಲಕ್ಷಾಂತರ ಜನ ಜೀವನ ನಡೆಸುತ್ತಿದ್ದು, ಇವರೂ ಕೂಡ ತಮ್ಮ ಸ್ವಕ್ಷೇತ್ರ ಮತ್ತು ಬೆಂಗಳೂರಿನಲ್ಲಿ ಪ್ರತ್ಯೇಕ ವೋಟರ್ ಐಡಿ ಹೊಂದಿದ್ದಾರೆ.

ಆದರೆ ಇವರೆಲ್ಲರೂ ತಮ್ಮ ಸ್ವಕ್ಷೇತ್ರದಲ್ಲ ಇಮತದಾನ ಮಾಡುವುದರಿಂದ ಇಲ್ಲಿರುವ ಮತದಾರರ ಪಟ್ಟಿಯನುಸಾರ ಅವರು ಮತ ಹಾಕಿಲ್ಲ ಎಂದೇ ಪರಿಗಣಿಸಲ್ಪುಡುತ್ತದೆ. ಇದೂ ಕೂಡ ಶೇಕಡಾವಾರು ಮತದಾನ ಪ್ರಮಾಣ ಇಳಿಕೆಗೆ ಪ್ರಮುಖ ಕಾರಣವಾಗಿದೆ.

ಪರಿಹಾರವೇನು?:

ವೋಟರ್ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಈ ಸಮಸ್ಯೆಗೆ ಪರಿಹಾರ ಎನ್ನುವವರಿದ್ದಾರೆ. ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವುದರಿಂದ ಓರ್ವ ವ್ಯಕ್ತಿ ಒಂದೇ ಕ್ಷೇತ್ರದಲ್ಲಿ ಒಂದೇ ಓಟರ್ ಐಡಿ ಹೊಂದಲು ಅನುವು ಮಾಡಿಕೊಡುತ್ತದೆ. ಇದರಿಂದ ಇನ್ನುಳಿದ ಒಂದು ಅಥವಾ ಹೆಚ್ಚು ಕ್ಷೇತ್ರಗಳಲ್ಲಿನ ಮತದಾರ ಪಟ್ಟಿಯಿಂದ ಆತನನ್ನು ಹೊರಗಿಡಬಹುದು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

Follow Us:
Download App:
  • android
  • ios