ನವದೆಹಲಿ[ಏ.28]: 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಬಿಡುವಿಲ್ಲದೆ ಬೇರೆ-ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಅವರ ಸೋದರಿ ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದ ಕಾನ್ಪುರ ವಿಮಾನ ನಿಲ್ದಾಣದಲ್ಲಿ ಪರಸ್ಪರ ಎದುರಾದರು. ಈ ಸಂದರ್ಭದಲ್ಲಿ ಪ್ರಿಯಾಂಕಾಗೆ ಒಳ್ಳೆಯ ಅಣ್ಣ ಎಂದರೆ ಏನು ಎಂಬುದರ ಬಗ್ಗೆ ರಾಹುಲ್‌ ವಿವರಣೆ ನೀಡುವ ವಿಡಿಯೋ ಭಾರೀ ವೈರಲ್‌ ಆಗಿದೆ.

ಏರ್‌ಪೋರ್ಟ್‌ನಲ್ಲಿ ಎದುರಾಗುವ ಪ್ರಿಯಾಂಕಾರ ಭುಜದ ಮೇಲೆ ಆತ್ಮೀಯವಾಗಿ ಕೈ ಹಾಕುವ ಅಣ್ಣ ರಾಹುಲ್‌, ನಿನಗೆ ಉತ್ತಮ ಅಣ್ಣ ಎಂಬುದರ ಅರ್ಥವೇನೆಂದು ಹೇಳುತ್ತೇನೆ. ಹಾಗೆಂದರೆ, ನಾನು ದೂರ ದೂರ ಸಂಚಾರಕ್ಕೆ ಸಣ್ಣ ಕಾಪ್ಟರ್‌ನಲ್ಲಿ ಇಕ್ಕಟ್ಟಾಗಿ ಕುಳಿತು ಪ್ರಯಾಣಿಸುತ್ತೇನೆ. ಮತ್ತೊಂದೆಡೆ ಆಕೆ ಸಣ್ಣ ಊರಿನ ಪ್ರಯಾಣಕ್ಕೂ ದೊಡ್ಡ ಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಾಳೆ’ ಎಂದು ಹಾಸ್ಯ ಮಾಡುತ್ತಾರೆ. ಇದಕ್ಕೆ ಜೋರಾಗಿ ನಗುತ್ತಲೇ ಉತ್ತರಿಸುವ ಪ್ರಿಯಾಂಕಾ, ಅದೆಲ್ಲಾ ನಿಜವಲ್ಲಾ ಎನ್ನುತ್ತಾರೆ.

ಸದ್ಯ ಈ ವಿಡಿಯೋ ಇಂಟರ್ನೆಟ್ ನಲ್ಲಿ ಭಾರೀ ವೈರಲ್ ಆಗುತ್ತಿದ್ದು, ಅಣ್ಣ ತಂಗಿಯ ಈ ಭಾಂದವ್ಯ ಎಲ್ಲರ ಮನಗೆಲ್ಲುತ್ತಿದೆ.