ಉಜ್ಜಯಿನಿ(ಮೇ.15): ಗಾಂಧಿ-ನೆಹರೂ ಪರಿವಾರದ ಮೇಲೆ ಪ್ರಧಾನಿ ಮೋದಿ ನಿರಂತರ ವಾಗ್ದಾಳಿ ನಡೆಸುತ್ತಿದ್ದು, ಆದರೆ ತಾವೆಂದೂ ಮೋದಿ ಪರಿವಾರವನ್ನು ಗುರಿಯಾಗಿಸಿಕೊಂಡು ವೈಯಕ್ತಿಕ ನಿಂದನೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಧಾನಿ ಮೋದಿ ತಂದೆ-ತಾಯಿಯನ್ನು ಅವಮಾನಿಸುವುದಕ್ಕಿಂತ ಸಾಯುವುದೇ ಮೇಲು ಎಂದಿರುವ ರಾಹುಲ್, ತಾವು ಮೋದಿ ಅವರನ್ನು ಪ್ರೀತಿಯಿಂದ ಸೋಲಿಸುತ್ತೇವೆಯೇ ಹೊರತು ದ್ವೇಷದಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೋದಿ ಬಾಯ್ತೆರೆದರೆ ದ್ವೇಷ ಕಾರುತ್ತಾರೆ. ಅವರು ನನ್ನ ತಂದೆ, ಅಜ್ಜಿ, ಮುತ್ತಜ್ಜ ಹೀಗೆ ಎಲ್ಲರನ್ನೂ ಅವಮಾನಿಸುತ್ತಾರೆ. ಆದರೆ ನಾನು ಮಾತ್ರ ಮೋದಿ ಪರಿವಾರವನ್ನು ರಾಜಕೀಯ ಲಾಭಕ್ಕಾಗಿ ಎಳೆದು ತರುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ