‘ಕೆಂಪುಕೋಟೆ’ಯಲ್ಲಿ ರಾಹುಲ್‌ ಚುನಾವಣಾ ಕಹಳೆ| ಕೇರಳದ ವಯನಾಡ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ| 5 ವರ್ಷದಲ್ಲಿ ರಾಹುಲ್‌ ಆಸ್ತಿ ಶೇ.69ರಷ್ಟುಏರಿಕೆ|

ವಯನಾಡ್‌[ಏ.05]: ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಅಲೆ ಎಬ್ಬಿಸುವ ಉದ್ದೇಶದಿಂದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ‘ವಾಮರಂಗದ ಭದ್ರಕೋಟೆ’ ಎನ್ನಿಸಿಕೊಂಡಿರುವ ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ವಿಶೇಷ ಘೋಷಣೆಯೊಂದನ್ನು ಮಾಡಿದ ಅವರು, ‘ಕೇರಳದಲ್ಲಿ ಪ್ರಬಲವಾಗಿರುವ ಸಿಪಿಎಂ ನನ್ನ ವಿರುದ್ಧ ಎಷ್ಟೇ ಟೀಕೆ ಮಾಡಲಿ. ಅದನ್ನು ಸಂತೋಷದಿಂದ ಸ್ವೀಕರಿಸುವೆ. ಇದಕ್ಕೆ ಪ್ರತಿಯಾಗಿ ಒಂದೇ ಒಂದು ಟೀಕೆಯನ್ನೂ ನಾನು ಮಾಡುವುದಿಲ್ಲ. ಏಕೆಂದರೆ ನಾನು ದಕ್ಷಿಣಕ್ಕೆ ಬಂದಿರುವುದು ಏಕತೆಯ ಸಂದೇಶ ಸಾರಲು’ ಎಂದು ಹೇಳಿದರು.

ರಾಹುಲ್‌ ಧೈರ್ಯಶಾಲಿ- ಪ್ರಿಯಾಂಕಾ:

Scroll to load tweet…

16 ಕೋಟಿ ಒಡೆಯ ರಾಹುಲ್:

ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ತಾವು 15.88 ಕೋಟಿ ರು. ಒಡೆಯ ಎಂದು ಘೋಷಿಸಿಕೊಂಡಿದ್ದಾರೆ. 2014ರ ಲೋಕಸಭಾ ಚುನಾವಣೆ ವೇಳೆ ತಮ್ಮಲ್ಲಿ 9.4 ಕೋಟಿ ರು. ಮೌಲ್ಯದ ಆಸ್ತಿ ಇದೆ ಎಂದು ರಾಹುಲ್‌ ಘೋಷಿಸಿಕೊಂಡಿದ್ದರು.

ಸಂಸದರ ವೇತನ, ರಾಯಧನ, ಬಾಡಿಗೆ, ಬಾಂಡ್‌ಗಳ ಮೇಲಿನ ಬಡ್ಡಿ, ಮ್ಯೂಚ್ಯುವೆಲ್‌ ಫಂಡ್‌ಗಳು ತಮ್ಮ ಆದಾಯದ ಮೂಲಗಳಾಗಿವೆ. 1995ರಲ್ಲಿ ಕೇಂಬ್ರಿಜ್‌ ವಿವಿಯ ಟ್ರಿನಿಟಿ ಕಾಲೇಜಿನಿಂದ ಎಂ.ಫಿಲ್‌ ಪದವಿ ಪೂರೈಸಿರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ರಾಹುಲ್‌ ಘೋಷಿಸಿಕೊಂಡಿದ್ದಾರೆ.

ಏನುಂಟು? ಏನಿಲ್ಲ?

- 10.08 ಕೋಟಿ ಮೌಲ್ಯದ ಸ್ಥಿರಾಸ್ತಿ

- 5.80 ಕೋಟಿ ಮೌಲ್ಯದ ಚರಾಸ್ತಿ

- ಬ್ಯಾಂಕಲ್ಲಿ 72 ಲಕ್ಷ ರು. ಸಾಲ

- ಸ್ವಂತ ಕಾರಿಲ್ಲ

- 333 ಗ್ರಾಂ ಚಿನ್ನ ಇದೆ

- 40000 ರು. ನಗದು

- ಬ್ಯಾಂಕಲ್ಲಿ 18 ಲಕ್ಷ ಠೇವಣಿ

- 5.19 ಕೋಟಿ ರು. ಬಾಂಡ್‌, ಮ್ಯೂಚುವಲ್‌ ಫಂಡ್‌

- ದೆಹಲಿ ಬಳಿಯ ಸುಲ್ತಾನ್‌ಪುರದಲ್ಲಿ ಜಮೀನು

- ಗುರುಗ್ರಾಮ ಬಳಿ ಎರಡು ಕಟ್ಟಡ

- ತಮ್ಮ ವಿರುದ್ಧ 5 ಕೇಸುಂಟು