ರಾಹುಲ್‌ ಗಾಂಧಿಗೆ 3 ಕೈ| ಜಾಹೀರಾತಿನಲ್ಲಿದ್ದ ಮೂರು ಕೈ ರಹಸ್ಯ ಬಯಲು

ನವದೆಹಲಿ[ಏ.09]: ಲೋಕಸಭಾ ಚುನಾವಣೆ ಸಂಬಂಧ ಕಾಂಗ್ರೆಸ್‌ ಬಿಡುಗಡೆ ಮಾಡಿದ ಜಾಹೀರಾತೊಂದು ಇದೀಗ ಸ್ವತಃ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿಗೆ ಮುಜುಗರ ತಂದೊಡ್ಡಿದೆ.

ಕಾಂಗ್ರೆಸ್‌ನ ‘ನ್ಯಾಯ್‌ ಯೋಜನೆ’ಯ ಪ್ರಚಾರದ ಜಾಹೀರಾತಿನಲ್ಲಿ ವಯೋವೃದ್ಧೆಯನ್ನು ತಬ್ಬಿಕೊಂಡಿರುವ ರಾಹುಲ್‌ ಸಂತೈಸುತ್ತಿರುವ ಚಿತ್ರವಿದೆ. ಆದರೆ ವೃದ್ಧೆಯನ್ನು ಹಿಡಿದುಕೊಂಡು ರಾಹುಲ್‌ಗೆ ಮೂರು ಕೈ ಇರುವ ರೀತಿ ಪೋಟೋ ತೆಗೆಯಲಾಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು, ಮೂಲ ಫೋಟೋವನ್ನು ಜಾಹೀರಾತಿಗೆ ಬಳಸುವ ವೇಳೆ ಮಾಡಿದ ಎಡವಟ್ಟು.

ಮೂಲ ಚಿತ್ರದಲ್ಲಿ ವೃದ್ಧೆಯನ್ನು ರಾಹುಲ್‌ ಜೊತೆಗೆ ಮತ್ತೊಬ್ಬ ವ್ಯಕ್ತಿ ಕೂಡಾ ಸಂತೈಸುತ್ತಿದ್ದಾರೆ. ಆದರೆ ಜಾಹೀರಾತಿಗೆ ಆ ಫೋಟೋ ಬಳಸುವಾಗ ಮತ್ತೊಬ್ಬ ವ್ಯಕ್ತಿಯ ದೇಹವನ್ನು ಅಳಿಸಿಹಾಕಲಾಗಿದೆ. ಆದರೆ ಕೈ ಭಾಗ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಈ ಫೋಟೋ ಇದೀಗ ವೈರಲ್‌ ಆಗಿದೆ.