Asianet Suvarna News Asianet Suvarna News

ಅನುಮಾನ, ಪ್ರತಿಭಟನೆಗೆ ಕಾರಣವಾದ ಇವಿಎಂ ಮತಯಂತ್ರಗಳ ಸ್ಥಳಾಂತರ!

ಇವಿಎಂ ಮತಯಂತ್ರಗಳ ಗುಪ್ತ ರವಾನೆ ವದಂತಿ| ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಹರಿಯಾಣಗಳಲ್ಲಿ ಮತಯಂತ್ರ ರವಾನೆ?| ಅನುಮಾನ ಮತ್ತು ಪ್ರತಿಭಟನೆಗೆ ಕಾರಣವಾದ ಇವಿಎಂ ಮತಯಂತ್ರಗಳ ಸ್ಥಳಾಂತರ| ವಿಪಕ್ಷ ಅಭ್ಯರ್ಥಿಗಳಿಂದ ಸ್ಟ್ರಾಂಗ್ ರೂಮ್ ಬಳಿ ಪ್ರತಿಭಟನೆ| ಆತಂಕ ಮೂಡಿಸಿದ ಮತಯಂತ್ರಗಳ ರವಾನೆ ವಿಡಿಯೋ| ಪ್ರತಿಭಟನಾ ಸ್ಥಳಕ್ಕೆ ಚುನಾವಣಾಧಿಕಾರಿಗಳ ದೌಡು| ಹೆಚ್ಚುವರಿ ಮತಯಂತ್ರಗಳು ಆಯೋಗದ ಸುಪರ್ದಿಗೆ| ಪ್ರತಿಭಟನಾಕಾರರಿಗೆ ಚುನಾವಣಾಧಿಕಾರಿಗಳಿಂದ ಮನವರಿಕೆ|

Protest Against Movement Of EVMs In UP and Bihar
Author
Bengaluru, First Published May 21, 2019, 2:30 PM IST

ಲಕ್ನೋ(ಮೇ.21): ಉತ್ತರಪ್ರದೇಶ, ಬಿಹಾರ, ಪಂಜಾಬ್ ಮತ್ತು ಹರಿಯಾಣಗಳಲ್ಲಿ ಹಲವೆಡೆ ಇವಿಎಂ ಮತಯಂತ್ರಗಳನ್ನು ಸ್ಥಳಾಂತರಿಸಲಾಗಿದೆ ಎಂಬ ವದಂತಿ ಹಬ್ಬಿದ್ದು, ಕೆಲಹೊತ್ತು ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ.

ಚಂದೋಲಿ ಲೋಕಸಭಾ ಕ್ಷೇತ್ರದ ಸ್ಟ್ರಾಂಗ್ ರೂಮ್‌ನಲ್ಲಿ ಇರಿಸಲಾಗಿದ್ದ ಇವಿಎಂ ಮತಯಂತ್ರಗಳನ್ನು ಸ್ಥಳಾಂತರಿಸುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಅಲ್ಲದೇ ವಿಪಕ್ಷಗಳ ಅಭ್ಯರ್ಥಿಗಳು ಕೂಡಲೇ ಸ್ಟ್ರಾಂಗ್ ರೂಮ್‌ ಬಳಿ ತೆರಳಿ ಪ್ರತಿಭಟನೆ ನಡೆಸಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಚುನಾವಣಾಧಿಕಾರಿಗಳು, ಇವಿಎಂ ಮತಯಂತ್ರಗಳನ್ನು ಬೇರೆಡೆ ಸ್ಥಳಾಂತರಿಸುತ್ತಿಲ್ಲ. ಬದಲಿಗೆ ಹೆಚ್ಚುವರಿ ಮತಯಂತ್ರಗಳನ್ನು ಆಯೋಗದ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿದರು.

ಅಲ್ಲದೇ ಪ್ರತಿಭನಾಕಾರರನ್ನು ಸ್ಟ್ರಾಂಗ್ ರೂಮ್‌ ಒಳಗಡೆ ಕರೆದುಕೊಂಡು ಹೋದ ಚುನಾವಣಾಧಿಕಾರಿಗಳು, ಇವಿಎಂ ಮತಯಂತ್ರಗಳು ಭದ್ರವಾಗಿವೆ ಎಂದು ಮನವರಿಕೆ ಮಾಡಿಕೊಟ್ಟರು.

Follow Us:
Download App:
  • android
  • ios