ಇಂಧೋರ್(ಮೇ.14): ರಸ್ತೆಯಲ್ಲಿ ಸಾಗುತ್ತಿದ್ದಾಗ ಮೋದಿ ಮೋದಿ ಎಂದು ಕೂಗಿದ ಪ್ರಧಾನಿ ಮೋದಿ ಬೆಂಬಲಿಗರನ್ನು, ತಮ್ಮ ಬೆಂಗಾವಲು ಪಡೆ ವಾಹನವನ್ನು ತಡೆದು ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭೇಟಿ ಮಾಡಿದ್ದಾರೆ.

ಮಧ್ಯಪ್ರದೇಶದ ಇಂಧೋರ್ ವಿಮಾನ ನಿಲ್ದಾಣದಿಂದ ಬರುತ್ತಿದ್ದ ಪ್ರಿಯಾಂಕಾ ಗಾಂಧಿಗೆ ಭಾರೀ ಭದ್ರತೆ ಒದಗಿಸಲಾಗಿತ್ತು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಕೆಲವು ಯುವಕರು, ಮೋದಿ ಮೋದಿ ಎಂದು ಘೋಷಣೆ ಕೂಗಿದರು.

ಕೂಡಲೇ ತಮ್ಮ ಕಾರು ನಿಲ್ಲಿಸಿದ ಪ್ರಿಯಾಂಕಾ, ಬೆಂಗಾವಲು ಪಡೆ ವಾಹನವನ್ನೂ ನಿಲ್ಲಿಸಿ ಯುವಕರ ಬಳಿ ತೆರಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.  ಅಲ್ಲದೇ ‘ಆಪ್ ಅಪ್ನಿ ಜಗಾ, ಮೇ ಅಪ್ನಿ ಜಗಾ’(ನೀವು ನಿಮ್ಮ ಜಾಗದಲ್ಲಿ, ನಾನು ನನ್ನ ಜಾಗದಲ್ಲಿ) ಎಂದು ಹೇಳಿ ಯುವಕರಿಗೆ ಶುಭಾಶಯ ಕೋರಿದರು. 

ಈ ವೇಳೆ ಮೋದಿ ಮೋದಿ ಎನ್ನುತ್ತಿದ್ದ ಯುವಕರು ಪ್ರಿಯಾಂಕಾ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದರು. ಎಲ್ಲರೊಂದಿಗೆ ಫೋಟೋಗೆ ಪೋಸ್ ನೀಡಿದ ಪ್ರಿಯಾಂಕಾ, ಬಳಿಕ ಚುನಾವಣಾ ಪ್ರಚಾರ ಸಭೆಗೆ ತೆರಳಿದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ