ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಫುಲ್ ಬ್ಯೂಸಿ| ಭಾಷಣ ನಡೆಸಿದ ಬಳಿಕ ನೆರೆದಿದ್ದ ಜನರನ್ನು ಭೇಟಿಯಾಗಲು ಬ್ಯಾರಿಕೇಡನ್ನೇ ಹತರ್ತಿದ್ರು ಕೈ ಪ್ರಧಾನ ಕಾರ್ಯದರ್ಶಿ| ನೋಡುಗರನ್ನು ಅಚ್ಚರಿಗೀಡು ಮಾಡಿದೆ ಪ್ರಿಯಾಂಕಾರ ಈ ವಿಡಿಯೋ

ನವದೆಹಲಿ[ಮೇ.14]: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೋಮವಾರದಂದು ಮಧ್ಯಪ್ರದೇಶದ ನಗರಗಳಲ್ಲಿ ಆಯೋಜಿಸಿದ್ದ ಹಲವಾರು ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು. ಇಲ್ಲಿನ ರತ್ಲಾಮ್ ಎಂಬಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಭಾಷಣ ಮಾಡಿದ್ದ ಪ್ರಿಯಾಂಕಾ ಗಾಂಧಿ ’ಕೇಂದ್ರ ಸರ್ಕಾರದ ಅಹಂಕಾರ ಹೆಚ್ಚಿದೆ' ಎನ್ನುವ ಮೂಲಕ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಆದರೆ ಈ ಸಮಾವೇಶ ಮುಗಿದ ಬಳಿಕ ಪ್ರಿಯಾಂಕಾ ಗಾಂಧಿಯವರ ಹೊಸತೊಂದು ರೂಪ ಜನರಿಗೆ ನೋಡಲು ಸಿಕ್ಕಿದೆ. 

ಹೌದು ರ‍್ಯಾಲಿಯನ್ನುದ್ದೇಶಿಸಿ ಮಾತು ಮುಗಿಸಿದ ಪ್ರಿಯಾಂಕಾ ವೇದಿಕೆ ಇಳಿದು ಬರುತ್ತಿದ್ದರು. ಈ ವೇಳೆ ಅಲ್ಲಿ ನೆರೆದಿದ್ದ ಜನರನ್ನು ಕಂಡ ಕಾಂಗ್ರೆಸ್ ನಾಯಕಿ, ಅಲ್ಲಿ ಹಾಕಲಾಗಿದ್ದ ಸುಮಾರು ಮೂರೂವರೆ ಅಡಿ ಎತ್ತರದ ಬ್ಯಾರೀಕೇಡ್ ಹತ್ತಿ ಜನರಿದ್ದ ಕಡೆ ತೆರಳಿ ಭೇಟಿಯಾಗಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೋಡುಗರನ್ನು ಅಚ್ಚರಿಗೀಡು ಮಾಡಿದೆ.

Scroll to load tweet…
Scroll to load tweet…

ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಗಾಂಧಿ ಈವರೆಗೆ ಸುಮಾರು ನೂರಕ್ಕೂ ಅಧಿಕ ಸಮಾವೇಶಗಳನ್ನು ನಡೆಸಿದ್ದಾರೆ. ಹೀಗಿದ್ದರೂ ಸದಾ ಆ್ಯಕ್ಟಿವ್ ಆಗಿರುವ ಅವರ ಮುಖದಲ್ಲಿ ಕೊಂಚವೂ ಬಳಲಿಕೆ ಸುಸ್ತು ಕಂಡು ಬಂದಿಲ್ಲ.