ತಿರುವನಂತಪುರಂ:  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡ್ ನಿಂದ ಸ್ಪರ್ಧೆ ಹಿನ್ನೆಲೆಯಲ್ಲಿ ಸಹೋದರನ ಗೆಲುವಿಗಾಗಿ ಪ್ರಿಯಾಂಕಾ ಗಾಂಧಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. 

ಶನಿವಾರದಿಂದಲೇ ವಯನಾಡಿನಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ. ಅಲ್ಲದೇ ಇದೇ ವೇಳೆ ಪುಲ್ವಾಮ ಹುತಾತ್ಮ ಯೋಧ ವಂಸತ್ ಕುಮಾರ್  ಮನೆಗೂ ಕೂಡ ಭೇಟಿ ನೀಡಲಿದ್ದಾರೆ. 

ಇನ್ನು ಇತ್ತ ಬಿಜೆಪಿ ಬೆಂಬಲಿತ ಎನ್ ಡಿ ಎ ಅಭಿವೃದ್ಧಿ ತುಷಾರ್ ವೆಳ್ಳಪಳ್ಳಿ ಪರ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಚಾರ ನಡೆಸಲಿದ್ದಾರೆ. 

ರಾಹುಲ್  ವಿರುದ್ಧ ಪ್ರಮುಖ ಸ್ಪರ್ಧಿಯಾಗಿರುವ ಎಲ್ ಡಿ ಎಫ್ ಅಭ್ಯರ್ಥಿ ಪಿಪಿ ಸುನೀಯರ್ ಪರ ಕಮ್ಯುನಿಸ್ಟ್ ಪಕ್ಷ ಮುಖಂಡರು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತಿದ್ದಾರೆ. 

ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾದ್ದರಿಂದ ಎಲ್ಲಾ ಅಭ್ಯರ್ಥಿಗಳೂ ಕೂಡ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.